spot_img

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Monday, September 20, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅಮೆರಿಕದ ಸಂಸ್ಥೆಯೊಂದರಿಂದ ಸಮೀಕ್ಷೆ : ಜಾಗತಿಕ ಮಟ್ಟದ ಜನಪ್ರಿಯತೆಯಲ್ಲಿ ಮೋದಿಯೇ ಮೊದಲು

- Advertisement -Nitte

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ಜಗತ್ತಿನ ನಾಯಕರ ಜನಪ್ರಿಯತೆಗೆ ಸಂಬಂಧಿಸಿದಂತೆ ಅಮೆರಿಕದ  “ಮಾರ್ನಿಂಗ್ ಕನ್ಸಲ್ಟ್”,  ಕಂಪನಿಯೊಂದು ನಡೆಸಿದ ಸಮೀಕ್ಷೆಯಲ್ಲಿ  ಜಾಗತಿಕ ಮಟ್ಟದ ಇತರೆ ನಾಯಕರಿಗಿಂದ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಭಾರತ, ಅಮೆರಿಕ, ಜಪಾನ್‌, ಬ್ರೆಜಿಲ್‌ ಸೇರಿದಂತೆ 13 ರಾಷ್ಟ್ರಗಳ ನಾಯಕರಲ್ಲಿ ನರೇಂದ್ರ ಮೋದಿಯವರಿಗೇ ಅತೀ ಹೆಚ್ಚು ಅಂಕಗಳು (ಶೇ.55) ದೊರೆತಿವೆ.

ಈ ಕುರಿತಂತೆ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಟ್ವಿಟ್ಟರ್’ನಲ್ಲಿ ಹಂಚಿಕೊಂಡಿದ್ದು, ಪ್ರದಾನಿ ಮೋದಿಯವರಿಗೆ ದೇಶದೆಡೆಗಿನ ಸಮರ್ಪಣ ಮನೋಭಾವಕ್ಕೆ ಜಾಗತಿಕವಾಗಿಯೂ ಮನ್ನಣೆ ಸಿಕ್ಕಿದೆ. ಅವರು ಬೇರೆ ದೇಶಗಳಿಗೆ ಹೋಲಿಸಿದರೆ ಕೊರೋನಾ ಬಿಕ್ಕಟ್ಟನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ಹಲವು ವಿಷಯಗಳಲ್ಲಿ ಅವರು ವಿಶ್ವದ ಜನಪ್ರಿಯ ನಾಯಕರಾಗಿರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ರಕ್ಷಣ ಸಚಿವ ರಾಜನಾಥ್‌ ಸಿಂಗ್‌ ಕೂಡ ಟ್ವೀಟ್ ಮಾಡಿದ್ದು, ಮೋದಿಯವರ ಜನಪ್ರಿಯತೆಯನ್ನು ಜಾಗತಿಕವಾಗಿ ಗುರುತಿಸಲಾಗಿದೆ. ಕೊರೋನಾ ಸಮಯದಲ್ಲಿ ಅವರು ತೋರುತ್ತಿರುವ ನಾಯಕತ್ವ ಗುಣವನ್ನು ಕೊಂಡಾಡಲಾಗುತ್ತಿದೆ. ಇದು ಭಾರತಕ್ಕೆ ನಿಜಕ್ಕೂ ಹೆಮ್ಮೆಯ ವಿಷಯ ಎಂದಿದ್ದಾರೆ.

- Advertisement -Srinivas collage

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss