Thursday, August 11, 2022

Latest Posts

ಅಮೆರಿಕಾದ ಪ್ರತಿಷ್ಠಿತ ನೌಕಾಯುದ್ಧ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಕೊಡಗಿನ ಲೆ.ಕ.ಮುಕ್ಕಾಟಿರ ಸೂರಜ್ ಅಯ್ಯಪ್ಪ ಆಯ್ಕೆ

ಮಡಿಕೇರಿ : ಕೊಡಗಿನ ಹೆಮ್ಮೆಯ ಸುಪುತ್ರ ಲೆಫ್ಟಿನೆಂಟ್ ಕಮಾಂಡರ್ ಮುಕ್ಕಾಟಿರ ಸೂರಜ್ ಅಯ್ಯಪ್ಪ ಅಮೆರಿಕಾದ ಪ್ರತಿಷ್ಠಿತ ನೌಕಾಯುದ್ಧ ಕಾಲೇಜಿಗೆ ಭಾರತದ ಪ್ರತಿನಿಧಿಯಾಗಿ ಆಯ್ಕೆಯಾಗಿದ್ದಾರೆ.
ಮೂಲತಃ ಗೋಣಿಕೊಪ್ಪ ಅರ್ವತ್ತೊಕ್ಲು ನಿವಾಸಿಯಾಗಿದ್ದು, ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುವ ನಿವೃತ್ತ ಲೆಫ್ಟಿನೆಂಟ್ ಕರ್ನಲ್ ಎಂ.ಎ. ಕಾರ್ಯಪ್ಪ ಹಾಗೂ ಸರಸ್ವತಿ ಕಾರ್ಯಪ್ಪ (ತವರುಮನೆ ಅಣ್ಣಳಮಡ)ರ ಪುತ್ರರಾಗಿರುವ ಸೂರಜ್ ಅಯ್ಯಪ್ಪ ಡೆಹ್ರಡೂನ್‍ನ ರಾಷ್ಟ್ರೀಯ ಮಿಲಿಟರಿ ಕಾಲೇಜಿನಲ್ಲಿ(ಆರ್‍ಐಎಂಸಿ) ಶಾಲಾ ಶಿಕ್ಷಣ ಪೂರ್ಣಗೊಳಿಸಿ ನಂತರ ನೇವಲ್ ಅಕಾಡೆಮಿಯಿಂದ ‘ಅಕಾಡೆಮಿ ಕೆಡೆಟ್ ಕ್ಯಾಪ್ಟನ್’ ಆಗಿ ಗುರುತಿಸಿಕೊಳ್ಳುವುದರೊಂದಿಗೆ ಪದವಿ ಪಡೆದಿದ್ದಾರೆ.
2010ರಲ್ಲಿ ಭಾರತೀಯ ನೌಕಾ ದಳದ ಅಧಿಕಾರಿಯಾಗಿ ಇವರು ಎಲ್ಲಾ ಚಟುವಟಿಕೆಗಳಲ್ಲಿ ಮೊದಲಿಗರಿದ್ದು ‘ಸ್ವಾರ್ಡ್ ಆಫ್ ಹಾನರ್’ ಹಾಗೂ ‘ಚೀಫ್ ಆಫ್ ನೇವಲ್ ಸ್ಟಾಫ್’ ಬಂಗಾರದ ಪದಕಕ್ಕೂ ಭಾಜನರಾಗುವುದರೊಂದಿಗೆ 2010ರಲ್ಲಿ ನೌಕಾ ಪಡೆಯ ಉತ್ಕøಷ್ಠ ಕಾರ್ಯ ನಿವಾಹಕ ಪಡೆಯ ಅಧಿಕಾರಿಯಾಗಿ ಸೇರ್ಪಡೆಗೊಂಡಿದ್ದರು.
ಸೂರಜ್ ಅವರು ತಮಮ ಕಾರ್ಯಾವಧಿಯಲ್ಲಿ ಹಲವಾರು ಸ್ಥಾನಗಳನ್ನು ಅಲಂಕರಿಸಿದ್ದು, ಕಮಾಂಡಿಂಗ್ ಆಫಿಸರ್, ನೇವಲ್ ಅಕಾಡೆಮಿಯ ಬೋಧಕ ಸೇರಿದಂತೆ ನೌಕಾಪಡೆಯ ಕಾರ್ಯಚರಣೆಯ ಮುಂಚೂಣಿ ಸ್ಥಾನದಲ್ಲಿದ್ದರು.
2016ರಲ್ಲಿ ವಿಶಾಖಪಟ್ಟಣದಲ್ಲಿ ರಾಷ್ಟ್ರಪತಿಗಳಿಂದ ಗಾರ್ಡ್ ಆಫ್ ಹಾನರ್‍ನ ಗೌರವಕ್ಕೆ ಪಾತ್ರರಾಗಿದ್ದ ಇವರು ಈ ವರ್ಷ ಅಮೇರಿಕದಲ್ಲಿ ನಡೆಯುವ ಸಿಬ್ಬಂದಿಗಳ ತರಬೇತಿಯಲ್ಲಿ 52 ದೇಶಗಳ ಅಧಿಕಾರಿಗಳ ಪೈಕಿ ಒಬ್ಬರಾಗಿದ್ದಾರೆ.
ಸೂರಜ್ ಅವರ ಪತ್ನಿ ಡಾ. ಯಮುನಾ (ಗೋಣಿಕೊಪ್ಪ ಹರಿಶ್ಚಂದ್ರಪುರ ನಿವಾಸಿ ಮನೆಯಪಂಡ ಕಾಮು ಮತ್ತು ದಿ. ಮನು ಮಂದಣ್ಣ ಅವರ ಪುತ್ರಿ) ದಂತ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ತನ್ನ ತಾಯಿ ಸರಸ್ವತಿ ಕಾರ್ಯಪ್ಪ ತಮ್ಮ ಜೀವನದುದ್ದಕ್ಕೂ ಸ್ಪೂರ್ತಿಯಾಗಿದ್ದರು. ತಮಗೆ ಸಂದಿರುವ ಗೌರವವನ್ನು ತಾಯಿಗೆ ಸಮರ್ಪಿಸಿಸುವುದಾಗಿ ಸೂರಜ್ ಹೇಳಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss