Sunday, July 3, 2022

Latest Posts

ಅಮೆರಿಕ ಕಾಳ್ಗಿಚ್ಚಿಗೆ 30 ಕ್ಕೇರಿದ ಸಾವಿನ ಸಂಖ್ಯೆ, 16,000 ಸಿಬ್ಬಂದಿಯಿಂದ ಮುಂದುವರಿದ ಕಾರ್ಯಾಚರಣೆ

ವಾಷಿಂಗ್ಟನ್: ಅಮೆರಿಕಾದ ಪೂರ್ವ ಕರವಾವಳಿ ಭಾಗದಲ್ಲಿ ಉಂಟಾಗಿದ್ದ ಕಾಳ್ಗಿಚ್ಚಿನಿಂದಾಗಿ ೩೦ ಮಂದಿ ಮೃತಪಟ್ಟಿದ್ದು, ಹತ್ತಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ.
ಈ ಬಗ್ಗೆ ಒರೆಗಾನ್ ತುರ್ತು ಸ್ಥಿತಿ ನಿರ್ವಹಣಾ ನಿರ್ದೇಶಕ ಆಯಂಡ್ರೋ ಫೆಲ್ಫ್ಸ್ ಅವರು ಸಮಯಕ್ಕೆ ಸರಿಐಆಗಿ ಸಾಕಷ್ಟು ಮಂದಿ ಎಚ್ಚರಿಕೆ ಸಂದೇಶ ಪಡೆದಿಲ್ಲ, ಇನ್ನು ಸುರಕ್ಷಿತ ಸ್ಥಳಗಳಿಗೆ ತೆರಳಲಾಗದ ಸಾಕಷ್ಟು ಮಂದಿ ಮೃತಪಟ್ಟಿದ್ದಾರೆ ಎಂದಿದ್ದಾರೆ.
ಕಾಳ್ಗಿಚ್ಚಿನಿಂದಾಗ ಸುಮಾರು ಹತ್ತು ಸಾವಿರ ಜನರನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಕ್ಯಾಲಿಪೋರ್ನಿಯಾದ ಸುಮಾರು ೨೮ ಭಾಗಗಳಲ್ಲಿ ಹಬ್ಬಿರುವ ಕಾಳ್ಗಿಚ್ಚನ್ನು ನಿಯಂತ್ರಿಸಲು ಅಗ್ನಿಶಾಮಕ ದಳದ ೧೬,೦೦೦ ಸಿಬ್ಬಂದಿ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಾಳೆ ಈ ಪ್ರದೇಶಕ್ಕೆ ಭೇಟಿ ನಿಡಲಿದ್ದು, ಪರಿಸ್ಥಿತಿ ಅವಲೋಕನ ಮಾಡಲಿದ್ದಾರೆ ಎನ್ನಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss