ಅಮೆರಿಕ: ಕಿಲ್ಲರ್ ಕೊರೋನಾಗೆ 59ಸಾವಿರ ಬಲಿ: 24ಗಂಟೆಗಳಲ್ಲಿ 2200 ಸಾವು

0
156

ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎಂದು ಹೇಳುವ ಅಮೆರಿಕದಲ್ಲಿ ಒಂದೇ ದಿನ 2200 ಮಂದಿ ಸೋಂಕಿತರು ಬಲಿಯಾಗಿದ್ದಾರೆ.

ಅಮೆರಿಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1.3 ಮಿಲಿಯನ್ ದಾಟಿದ್ದು, ಸೋಂಕಿಗೆ 59 ಸಾವಿರ ಮಂದಿ ಬಲಿಯಾಗಿದ್ದಾರೆ. ದೇಶದಲ್ಲಿ ಈ ವರಗೂ ಕೊರೋನಾ ಸೋಂಕಿನಿಂದ 1.18 ಲಕ್ಷ ಮಂದಿ ಗುಣಮುಖರಾಗಿದ್ದಾರೆ.
ಸ್ಪೇನ್ ನಲ್ಲಿ 2 ಲಕ್ಷ ಸೋಂಕಿತರಲ್ಲಿ 1ಲಕ್ಷಮಂದಿ ಗುಣವಾಗಿದ್ದು, 23 ಸಾವಿರ ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇಟಲಿಯಲ್ಲಿ ಕೊರೋನಾಗೆ 2ಲಕ್ಷ ಸೋಂಕಿತರಲ್ಲಿ 69ಸಾವಿರ ಮಂದಿ ಗುಣಮುಖರಾಗಿದ್ದು, 27 ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ.

ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 30 ಸಾವಿರ ಗಡಿ ದಾಟಲಿದ್ದು, ಸಾವಿನ ಸಂಖ್ಯೆ 948ಗೆ ಏರಿಕೆಯಾಗಿದ್ದು, 7027 ಮಂದಿ ಗುಣಮುಖರಾಗಿದ್ದಾರೆ.

LEAVE A REPLY

Please enter your comment!
Please enter your name here