ವಾಷಿಂಗ್ಟನ್: ವಿಶ್ವದ ಶ್ರೀಮಂತ ರಾಷ್ಟ್ರವನ್ನು ಬುಗುರಿಯಂತೆ ಆಡಿಸುತ್ತಿರುವ ಕೊರೋನಾ. ಕಳೆದ 24ಗಂಟೆಗಳಲ್ಲಿ 1330 ಮಂದಿಯನ್ನು ಬಲಿಪಡೆದಿದ್ದು, ದೇಶದಲ್ಲಿ ಈವರೆಗೂ 55 ಸಾವಿರದ ಗಡಿಯತ್ತ ಸಾಗುತ್ತಿದೆ ಎಂದು ಜೊಹಾನ್ಸ್ ಹಾಪ್ ಕಿನ್ಸ್ ವಿಶ್ವ ವಿದ್ಯಾಲಯ ತಿಳಿಸಿದೆ.
ದೇಶದಲ್ಲಿ ಮಹಾಮಾರಿ ಕಪರೋನಾ ಸೋಂಕಿನಿಂದ ಈಗಾಗಲೇ 54,841 ಮಂದಿ ಬಲಿಯಾಗಿದ್ದು, 9,64,900ಕ್ಕೂ ಅಧಿಕ ಕೊರೋನಾ ಸೋಂಕಿತರು ಪತ್ತೆಯಾಗಿದ್ದರೆ ಎಂದು ವರದಿ ತಿಳಿಸಿದೆ.
ಇಡೀ ವಿಶ್ವದಲ್ಲಿನ ಸೋಂಕಿತರಲ್ಲಿ ಅಮೆರಿಕ ಪಾಲು ಹೆಚ್ಚಾಗಿದ್ದು, ಸೋಂಕಿನಿಂದ ಬಲಿಯಾದವರು ಹೆಚ್ಚಾಗುತ್ತಿದ್ದು, ಶನಿವಾರ ಕೊರೋನಾ ಸೋಂಕಿನಿಂದ ಬರೋಬ್ಬರಿ 2,494ಮಂದಿ ಬಲಿಯಾಗಿದ್ದರು.