ಅಮೆರಿಕ: ಕೊರೋನಾ ರುದ್ರ ತಾಂಡವ: 24ಗಂಟೆಗಳಲ್ಲಿ 2502 ಮಂದಿ ಬಲಿ

0
94

ವಾಷಿಂಗ್ಟನ್: ಕೊರೋನಾ ಸೋಂಕಿನಿಂದ ತತ್ತರಿಸಿ ಹೋಗಿರುವ ಅಮೆರಿಕದಲ್ಲಿ ಇದೀಗ 61 ಸಾವಿರ ಮಂದಿ ಸೋಂಕಿನಿಂದ ಬಲಿಯಾಗಿದ್ದು, ಕಳೆದ 24 ಗಂಟೆಗಳಲ್ಲಿ 2,502 ಮಂದಿ ಸಾವನ್ನಪ್ಪಿದ್ದಾರೆ.

ದೇಶದಲ್ಲಿ ಮಹಾಮಾರಿ ಕೊರೋನಾ ಸೋಂಕಿಗೆ 1.6 ಮಿಲಿಯನ್ ಮಂದಿ ತುತ್ತಾಗಿದ್ದು, 1.23 ಸಾವಿರ ಮಂದಿ ಗುಣಮುಖರಾಗಿದ್ದು, ಒಂದೇ ದಿನ 2502 ಮಂದಿ ಬಲಿಯಾಗಿದ್ದಾರೆ ಎಂದು ಜಾನ್ ಹಾಪ್ ಕಿನ್ಸ್ ವಿಶ್ವ ವಿದ್ಯಾಲಯದ ವರದಿ ತಳಿಸಿದೆ.

ಕಳೆದ ಎರಡು ದನದಲ್ಲಿ ಕೊರೋನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ನಿಟ್ಟುಸಿರು ಬಿಡುವ ಹೊತ್ತಿನಲ್ಲಿ ಮತ್ತೇ ಕೊರೋನಾ ಸೋಂಕಿನಿಂದ ಬಲಿಯಾದವರ ಸಂಖ್ಯೆ ಏರಿಕೆಯಾಗಿದೆ.

ವಿಶ್ವದಲ್ಲಿ ಕೊರೋನಾ ಸೋಂಕಿನಿಂದ ಈಗಾಗಲೇ 2ಲಕ್ಷ 27 ಸಾವಿರ ಮಂದಿ ಬಲಿಯಾಗಿದ್ದು, 3.19 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ವಿಶ್ವದಲ್ಲಿ ಸೋಂಕಿನಿಂದ ಗುಣಪಟ್ಟವರ ಸಂಖ್ಯೆ 9ಲಕ್ಷ 72ಸಾವಿರಕ್ಕೆ ಏರಿಕೆಯಾಗಿದೆ.

 

LEAVE A REPLY

Please enter your comment!
Please enter your name here