Monday, July 4, 2022

Latest Posts

ಅಮೆರಿಕ: ಕೋವಿಡ್ -19 ವಿರುದ್ಧದ ಸಮರ ಪ್ರತಿ 7 ವೈದ್ಯರಲ್ಲೊಬ್ಬರು ಭಾರತೀಯ !

ನ್ಯೂಯಾರ್ಕ್: ದೇಶಗಳು ತಮ್ಮ ಆರ್ಥಿಕತೆಯ ಹೆಸರಿನಲ್ಲಿ ಲಾಕ್‌ಡೌನನ್ನು ತೆಗೆದುಹಾಕುವ ಧಾವಂತ ನಡೆಸಿದ್ದೇ ಆದರೆ ಅದು ಕೊರೋನಾ ವೈರಾಣು ಹಾವಳಿಯನ್ನು ಇನ್ನಷ್ಟು ತೀವ್ರಗೊಳಿಸಿ ಅನರ್ಥಕ್ಕೆ ಕಾರಣವಾದೀತೆಂಬುದಾಗಿ ಭಾರತೀಯ ಮೂಲಕ ಅಮೆರಿಕ ವೈದ್ಯರ ಸಂಘದ ಅಧ್ಯಕ್ಷ ಡಾ.ಸುರೇಶ್ ರೆಡ್ಡಿ ಎಚ್ಚರಿಸಿದ್ದಾರೆ.ಇದೇ ವೇಳೆ , ಅಮೆರಿಕದಲ್ಲಿ ಕೋವಿಡ್-೧19 ಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ಪೈಕಿ ಪ್ರತಿ ೭ನೇ ವೈದ್ಯ ಭಾರತೀಯ ಮೂಲದವರು ಎಂಬ ಅಚ್ಚರಿಯ ಸುದ್ದಿಯನ್ನು ಅವರು ನೀಡಿದ್ದಾರೆ.
ಅಮೆರಿಕದಲ್ಲಿ ಕೊರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಸಾವಿರಾರು ಮಂದಿ ಭಾರತೀಯ ಮೂಲದ ವೈದ್ಯರು ಶ್ರಮಿಸುತ್ತಿದ್ದು, ಇವರು ವಸ್ತುಶಃ ಯೋಧರಂತೆ ಕಾರ್ಯಾಚರಿಸುತ್ತಿದ್ದಾರೆ. ಕೋವಿಡ್-೧೯ರೋಗಿಗಳಿಗೆ ಚಿಕಿತ್ಸೆ ನೀಡುವ ಪ್ರತಿ ೭ ನೇಯ ವೈದ್ಯ ಭಾರತೀಯ ಮೂಲದವರೆಂಬುದಾಗಿ ಅವರು ತಿಳಿಸಿದ್ದಾರೆ.
ಕೋವಿಡ್-೧೯ ವಿರುದ್ಧ ಮುಂಚೂಣಿಯಲ್ಲಿ ನಿಂತು ಹೋರಾಟ ನಡೆಸುತ್ತಿರುವ ಭಾರತೀಯ ಸಮುದಾಯದ ಬಗ್ಗೆ ವ್ಯಾಪಕ ಮೆಚ್ಚುಗೆ ವ್ಯಕ್ತಗೊಳ್ಳುತ್ತಿರುವುದನ್ನೂ ಅವರು ಹಂಚಿಕೊಂಡಿದ್ದು, ವೈದ್ಯರೀಗ ವಸ್ತುಶಃ ಯೋಧರಂತೆ ಕಾರ್ಯಾಚರಿಸುತ್ತಿದ್ದಾರೆ ಎಂಬುದಾಗಿ ಅವರು ಸಂದರ್ಶನವೊಂದರಲ್ಲಿ ಹೇಳಿದ್ದಾರೆ.
ವಿಶ್ವಾದ್ಯಂತ ಇರುವ ಸರ್ಕಾರಗಳು ಲಾಕ್ ಡೌನ್ ನ್ನು ಏಕಾ ಏಕಿ ತೆರವುಗೊಳಿಸಿ ಆರ್ಥಿಕತೆಯನ್ನು ಪುನಾರಂಭ ಮಾಡಲು ಹೋಗಬಾರದು. ಒಂದು ವೇಳೆ ಆ ರೀತಿ ಮಾಡಿದರೆ ಅದರಿಂದ ಉಂಟಾಗುವ ಅನಾಹುತ ಅತ್ಯಂತ ಭೀಕರವಾಗಿರಲಿದೆ ಎಂದು ಎಚ್ಚರಿಸಿದ್ದಾರೆ.ಜನರಿಗೆ ನಿರ್ಬಂಧಗಳಿಂದ ದಣಿದಿರಬಹುದು, ಆತಂಕ ಇರಬಹುದು, ಆದರೂ ಅತ್ಯಂತ ಎಚ್ಚರಿಕೆಯಿಂದ ಹಂತಹಂತವಾಗಿಯೇ ಲಾಕ್‌ಡೌನ್ ಸಡಿಲಿಸಬೇಕಾಗಿದೆ ಎಂದು ಅವರು ವಿವರಿಸಿದರು.
ಇನ್ನೂ ಔಷಧ ಕಂಡುಕೊಳ್ಳಲಾಗದಿರುವ ಹಿನ್ನೆಲೆಯಲ್ಲಿ ಕೊರೋನಾ ವಿರುದ್ಧದ ಹೋರಾಟ ದೀರ್ಘವಾದದ್ದು, ಅದು ಒಂದೆರಡು ತಿಂಗಳುಗಳಲ್ಲಿ ಮುಗಿಯುವಂಥದ್ದಲ್ಲ .ಇದಕ್ಕೆ ಲಸಿಕೆ ಕಂಡುಕೊಳ್ಳುವ ಇಲ್ಲವೇ ನಿರೋಧಕ ವೈರಾಣು ಅಭಿವೃದ್ಧಿಯಾಗುವವರೆಗೆ ಅಂದರೆ ೧-೨ ವರ್ಷಗಳ ಕಾಲ ಮುಂದುವರಿಯಬಹುದು.ಕೊರೋನಾ ವೈರಾಣು ಹರಡುವಿಕೆ ನಿಯಂತ್ರಣಕ್ಕಾಗಿ ಸರ್ಕಾರ ಕೈಗೊಳ್ಳುವ ಕ್ರಮಗಳು, ವೈದ್ಯರ ಶ್ರಮ, ಜೊತೆಗೆ ನಿಯಮಗಳನ್ನು ಪಾಲಿಸುವ ಜನರಿಂದ ಮಾತ್ರ ಕೋವಿಡ್-19 ರ ವಿರುದ್ಧದ ಹೋರಾಟದಲ್ಲಿ ಗೆಲುವು ಸಾಧ್ಯ ಎಂದು ಸುರೇಶ್ ರೆಡ್ಡಿ ಒತ್ತಿ ಹೇಳಿದ್ದಾರೆ.
ಅಮೆರಿಕದಲ್ಲಿ ಕೊರೋನಾ ಸಾವಿನ ಸಂಖ್ಯೆ ೫೫ಸಾವಿರಕ್ಕೇರಿದ್ದು, ಸೋಂಕಿತರ ಸಂಖ್ಯೆ ೯,೬೫ಸಾವಿರ ದಾಟಿದ್ದು, ದೇಶದಲ್ಲಿನ ಪರಿಸ್ಥಿತಿ ಅತ್ಯಂತ ಗಂಭೀರವೆನಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss