Thursday, August 11, 2022

Latest Posts

ಅಮೆರಿಕ ಚುನಾವಣೆ ಅನಿಶ್ಚಿತತೆ: ಟ್ರಂಪ್ ಹತಾಶೆ, ಬಿಡೇನ್ ವಿಶ್ವಾಸ?

ವಾಷಿಂಗ್ಟನ್: ಅಮೆರಿಕ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಅತ್ಯಂತ ಅನಿಶ್ಚಿತತೆಯನ್ನೆದುರಿಸುತ್ತಿದ್ದು, ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರಂಭದಲ್ಲಿ ತಾನೇ ವಿಜಯಿಯಾಗಿರುವುದಾಗಿ ಘೋಷಿಸಿಕೊಂಡಿದ್ದರೂ, ಇದೀಗ ಕೆಲವು ನಿರ್ಣಾಯಕ ರಾಜ್ಯಗಳಲ್ಲಿ ಮುನ್ನಡೆ ಸಾಧಿಸಿ ತನ್ನ ಪರವಾಗಿದ್ದ ಮತ ಎಣಿಕೆ ಪ್ರಕ್ರಿಯೆ ರಾತ್ರೆ ಬೆಳಗಾಗುವುದರೊಳಗೆ ಚಮತ್ಕಾರ ರೀತಿಯಲ್ಲಿ ಬದಲಾವಣೆಗೊಂಡಿರುವ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಇತ್ತ ಎದುರಾಳಿ ಬಿಡೇನ್ ಪಾಳಯ , ಬಿಡೇನ್ ಅವರು ಗೆಲುವಿನ ಹಳಿಯಲ್ಲಿ ಸಾಗುತ್ತಿರುವುದಾಗಿ ಹೇಳಿಕೊಂಡಿದೆ.
ಫ್ಲೊರಿಡಾ ಮತ್ತು ಪೆನ್ಸೆಲ್ವೇನಿಯಾ ರಾಜ್ಯಗಳಲ್ಲಿ ಟ್ರಂಪ್ ಮುನ್ನಡೆ ಸಾಧಿಸಿದ್ದಾರೆ. ಇತರ ನಿರ್ಣಾಯಕ ರಾಜ್ಯಗಳೆನಿಸಿದ ನಾರ್ತ್ ಕರೋಲಿನಾ ಮತ್ತು ಜಾರ್ಜಿಯಾಗಳಲ್ಲಿ ಟ್ರಂಪ್ ಅಲ್ಪ ಮುನ್ನಡೆ ಸಾಧಿಸಿದ್ದರೆ, ಜೋಯಿ ಬಿಡೇನ್ ನೇವಾಡ, ಮಿಚಿಗನ್, ವಿಸ್ಕಾನ್‌ಸಿನ್‌ಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಆದಾಗ್ಯೂ ಮತ ಎಣಿಕೆಗೆ ಇನ್ನೂ ದೊಡ್ಡ ಪ್ರಮಾಣದಲ್ಲಿ ಬಾಕಿಯಿದ್ದು, ಫಲಿತಾಂಶ ಯಾವುದೇ ತಿರುವು ಪಡೆಯಬಹುದು ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಆದಾಗ್ಯೂ ಪ್ರಕೃತ ಟ್ರಂಪ್ 213 ಮತಗಳನ್ನು ಪಡೆದರೆ ಬಿಡೇನ್ 238 ಮತಗಳನ್ನು ಗಳಿಸಿರುವುದಾಗಿ ವರದಿಗಳು ತಿಳಿಸಿವೆ. ಈವರೆಗಿನ ಮತ ಎಣಿಕೆಯಂತೆ, ಬಿಡೇನ್ 69,756,081(ಶೇ.50.13)ಮತಗಳನ್ನು ಪಡೆದರೆ, ಟ್ರಂಪ್ 67,148,706 (ಶೇ.48.25)ಮತಗಳನ್ನು ಪಡೆದಿರುವುದಾಗಿ ವರದಿಗಳು ತಿಳಿಸಿವೆ. ಒಟ್ಟಾರೆಯಾಗಿ ವಿಶ್ವದ ದೊಡ್ಡಣ್ಣ ಖ್ಯಾತಿಯ ಅಮೆರಿಕದ ಅಧ್ಯಕ್ಷೀಯ ಚುನಾವಣೆ ಈ ಬಾರಿ ಅತ್ಯಂತ ಗೊಂದಲದಿಂದ ಕೂಡಿರುವುದು ಕಂಡುಬಂದಿದ್ದು, ಫಲಿತಾಂಶ ತೀವ್ರ ಕುತೂಹಲ ಕೆರಳಿಸಿದೆ.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss