ವಾಷಿಂಗ್ಟನ್: ಅಮೆರಿಕ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ರಿಚಿ ಟೊರೆಸ್ ಅಮೆರಿಕ ಕಾಂಗ್ರೆಸ್ಗೆ ಚುನಾಯಿತರಾದ ಮೊದಲ ಕಪ್ಪುವರ್ಣೀಯ ಸಲಿಂಗಿ ಎಂಬ ಖ್ಯಾತಿಗೆ ಒಳಗಾಗಿದ್ದಾರೆ.
32 ವರ್ಷದ ಟೊರೆಸ್, ನ್ಯೂಯಾರ್ಕ್ ನಗರ ಕೌನ್ಸಿಲ್ ಸದಸ್ಯರಾಗಿದ್ದು, ನ್ಯೂಯಾರ್ಕ್ನ 15ನೇ ಕಾಂಗ್ರೆಸ್ ಜಿಲ್ಲೆಯಿಂದ ಗೆಲುವು ಸಾಧಿಸಿದ್ದಾರೆ. ತಮ್ಮ ಎದುರಾಳಿ, ರಿಪಬ್ಲಿಕನ್ ಪಕ್ಷದ ಪ್ಯಾಟ್ರಿಕ್ ಡೆಲಿಸಸ್ ಎದುರು ಅವರು ಜಯಭೇರಿ ಬಾರಿಸಿದ್ದಾರೆ.
ದಕ್ಷಿಣ ಬ್ರಾಂಕ್ಸ್ನಲ್ಲಿ ಇಂದು ಹೊಸ ಯುಗ ಆರಂಭವಾಗಿದೆ’ ಎಂದು ಟೊರೆಸ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ‘ನ್ಯೂಯಾರ್ಕ್ ನಗರ ಜೀವಿಸಲು ತಮ್ಮ ಜೀವವನ್ನು ಪಣವಾಗಿಟ್ಟ ಅಗತ್ಯ ಕೆಲಸಗಾರರ ಆಕಾಂಕ್ಷೆಗಳನ್ನು ಪೂರ್ತಿಗೊಳಿಸಲು ಅವರನ್ನು ಪ್ರತಿನಿಧಿಸುವ ಅವಕಾಶವು ಜೀವಮಾನದ ಗೌರವ’ ಎಂದು ಅವರು ತಿಳಿಸಿದ್ದಾರೆ.