Thursday, July 7, 2022

Latest Posts

ಅಮೆರಿಕ-ಬೆಂಗಳೂರು ನೂತನ ವಿಮಾನ; ಬೋಯಿಂಗ್ 787-9

ಹೊಸದಿಲ್ಲಿ: ಭಾರತ ಮತ್ತು ಅಮೆರಿಕ ನಡೆಸುವ ನಡುವೆ ನೇರ ಸಂಪರ್ಕ ಕಲ್ಪಿಸಲು ಮೊದಲ ಬಾರಿ ನೇರ ವಿಮಾನಯಾನವನ್ನು ಅಕ್ಟೋಬರ್‌ನಲ್ಲಿ ಅಮೆರಿಕ ಪ್ರಾರಂಭಿಸುತ್ತಿದ್ದು, ಬೋಯಿಂಗ್ 787-9 ವಿಮಾನ ಅಮೆರಿಕದಿಂದ- ಬೆಂಗಳೂರಿಗೆ ದಿನನಿತ್ಯ ಹಾರಾಟ ನಡೆಸಲಿದೆ.

ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣದಿಂದ ಅಮೆರಿಕದ ಸಿಯಾಟಲ್ ಟಕೋಮಾ ವಿಮಾನ ನಿಲ್ದಾಣಕ್ಕೆ ದಿನನಿತ್ಯ ಹಾರಾಟ ನಡೆಸಲಿದ್ದು, ಅಮೆರಿಕದ ಸುತ್ತಮುತ್ತ ಇರುವ ಸ್ಯಾನ್ ಫ್ರಾನ್ಸಿಸ್ಕೊ, ವ್ಯಾಲಿ, ಡೆನ್ವರ್, ಡಲ್ಲಾಸ್ ಮತ್ತು ಚಿಕಾಗೊ ಪ್ರಯಾಣಿಕರಿಗೆ ಬಹು ನಿಲುಗಡೆಗಳ ಅವಶ್ಯಕತೆ ಇರುವುದಿಲ್ಲ.

ಅಮೆರಿಕಕ್ಕೂ ವಿಮಾನ ಸಂಪರ್ಕ ಕಲ್ಪಿಸುವ ಮೂಲಕ ಭಾರತದಲ್ಲಿ 3ನೇ ಅತಿ ದೊಡ್ಡ ವಿಮಾನ ನಿಲ್ದಾಣವೆಂದು ಪರಿಗಣಿಸಿದ್ದ  ಚೆನ್ನೈಯನ್ನು ಬೆಂಗಳೂರು ವಿಮಾನ ನಿಲ್ದಾಣ ಹಿಂದಿಕ್ಕಿದೆ. ಇತ್ತೀಚೆಗಷ್ಟೆ  ಕೆಂಪೆಗೌಡ ವಿಮಾನ ನಿಲ್ದಾಣ  ಆಮ್‌ಸ್ಟರ್‌ಡ್ಯಾಮ್, ಅಡೀಸ್ ಅಬಾಬಾಕ್ಕೆ ಹೊಸದಾಗಿ ವಿಮಾನ ಸೇವೆ ಆರಂಭಿಸಿದ್ದು, ಜಪಾನ್‌ನ ಟೋಕಿಯೊ ಸಹಿತ  ಮುನೀಚ್‌ಗೆ ಶೀಘ್ರವೇ ಪ್ರಾರಂಭವಾಗಲಿದೆ ಎಂದು ತಿಳಿದು ಬಂದಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss