Saturday, August 13, 2022

Latest Posts

ಅಮೆರಿಕ ಸಂಸತ್‌ನಲ್ಲಿ ಎಚ್1 ಬಿ ವೀಸಾ ಪರಿಷ್ಕರಣೆ ವಿಧೇಯಕ ಮಂಡನೆ: ವಿದೇಶಿ ವ್ಯಾಸಂಗಾರ್ಥಿಗಳಿಗೆ ಮೂಗುದಾರ!

ವಾಷಿಂಗ್‌ಟನ್: ಉನ್ನತ ವ್ಯಾಸಂಗದ ನಂತರ ವಿದೇಶಿಗರನ್ನು ವಾಪಸ್ ಕಳುಹಿಸುವ ಖಾಸಗಿ ಸಂಸ್ಥೆಗಳಿಗೆ ಸಂಪೂರ್ಣ ಕಡಿವಾಣ ಹಾಕುವ ಶಾಸನಕ್ಕೆ ಹಲ್ಲು ಮೂಡಿಸಲು ಅಮೆರಿಕ ಸಜ್ಜಾಗಿದೆ.

ಈ ಸಂಬಂಧ ಅಮೆರಿಕನ್ ಸೆನೆಟ್‌ನಲ್ಲಿ ಪ್ರಮುಖ ವಿಧೇಯಕವೊಂದು ಮಂಡನೆಯಾಗಿದೆ. ಕೊರೋನಾ ಮಹಾಮಾರಿ ಸೋಂಕಿನಿಂದ ಎಚ್ ಒನ್ ಬಿ ವೀಸಾ ನೀಡಿಕೆ, ವಿದೇಶಿಯರ ಪೌರತ್ವ ಹಾಗೂ ಸ್ಥಳೀಯರಿಗೆ ನೌಕರಿ ಇತ್ಯಾದಿ ವಿಷಯಗಳಿಗೆ ಸಂಬಂಧಿಸಿದ ವಿಧೇಯಕವನ್ನು ಶುಕ್ರವಾರ ಮಂಡಿಸಲಾಗಿದೆ. ಮುಖ್ಯವಾಗಿ ಅಮೆರಿಕದಲ್ಲಿ ಉನ್ನತ ವ್ಯಾಸಂಗಕ್ಕೆಂದು ಬೇರೆ, ಬೇರೆ ದೇಶಗಳಿಂದ ಬರುವಂತಹ ಅಭ್ಯರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ನೂತನ ಕಾಯಿದೆ ರೂಪಿತವಾಗಲಿದೆ ಎಂದು ಸೆನೆಟ್ ಅಭಿಪ್ರಾಯಪಟ್ಟಿದೆ.

ಭಾರತವೂ ಸೇರಿದಂತೆ ಪ್ರಪಂಚದ ಹಲವಾರು ದೇಶಗಳ ಸಾವಿರಾರು ಯುವಕ, ಯುವತಿಯರು ಅಮೆರಿಕದ ವಿವಿಧ ವಿವಿ ಹಾಗು ಅಕಾಡೆಮಿಗಳಲ್ಲಿ ವ್ಯಾಸಂಗ ಮಾಡುತ್ತಿದ್ದು, ಇವರೆಲ್ಲರ ಪ್ರತಿಭೆ ಮತ್ತು ಕೌಶಲ್ಯ ಈ ದೇಶಕ್ಕೇ ದಕ್ಕುವ ರೀತಿಯಲ್ಲಿ ಹೊಸ ಕಾನೂನು ರೂಪುಗೊಳ್ಳಲಿದೆ. ಅಮೆರಿಕ ನಿವಾಸಿಗಳಲ್ಲದವರಿಗೆ ವಿಧಿಸಲಾಗಿದ್ದ ಕೆಲವೊಂದು ವೀಸಾ ನಿಬಂಧನೆಗಳೂ ಈಗ ಪರಿಷ್ಕರಣೆಯಾಗಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss