ವಾಷಿಂಗ್ಟನ್: ಕೊರೋನಾ ಮಹಾಮಾರಿಯನ್ನು ಇಡೀ ಪ್ರಪಂಚಕ್ಕೆ ಹರಡಿದ ಅಪವಾದ ಹೊತ್ತ ಚೀನಾ ವಿರುದ್ಧ ಅಮೆರಿಕ ಈಗ ಕಠಿಣ ಶಾಸನ ಜಾರಿಗೊಳಿಸುವ ಹೊಸ್ತಿಲಲ್ಲಿದೆ.
ವುಹಾನ್ ಮಾಂಸದ ಮಾರುಕಟ್ಟೆಗೆ ಕಾಯಂ ಬೀಗ, ಹಾಂಕ್ಕಾAಗ್ ವಹಿವಾಟ ಸ್ಥಗಿತ ಸೇರಿದಂತೆ ಚೀನಾ ದೇಶದ ಪ್ರಮುಖ ಅಂತಾರಾಷ್ಟಿçÃಯ ವ್ಯಾಪಾರ, ವಹಿವಾಟಿಗೆ ಸಂಪೂರ್ಣ ನಿರ್ಬಂಧ ಹೇರುವ ಶಾಸನದ ಕರಡನ್ನು ಮಂಗಳವಾರ ಅಮೆರಿಕ ಸಂಸತ್ (ಕಾಂಗ್ರೆಸ್)ನಲ್ಲಿ ಮಂಡಿಸಲಾಗಿದೆ.
ಮಂಡನೆಯಾದ ಕರಡಿನಲ್ಲಿ ವುಹಾನ್ನಲ್ಲಿ ಅಮೆರಿಕ ಹಾಗ ಮಿತ್ರದೇಶಗಳು ಪ್ರತ್ಯೇಕವಾಗಿ ಕೊರೋನಾ ತನಿಖೆ ಕೈಗೆತ್ತಿಕೊಳ್ಳುವ ಸಂಗತಿಯೂ ಪ್ರಮುಖವಾಗಿ ಪ್ರಸ್ತಾಪವಾಗಿದೆ. ಇದಕ್ಕೆ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅರವತ್ತು ದಿನದೊಳಗೆ ಸಹಿ ಮಾಡಲು ಅವಕಾಶವಿದೆ. ಟ್ರಂಪ್ ಈ ಕರಡು ಪ್ರಸ್ತಾವನೆಗೆ ಒಪ್ಪಿಗೆ ನೀಡಿದ ಕೂಡಲೇ ಶಾಸನಾತ್ಮಕವಾಗಿ ಚೀನಾಗೆ ಮೂಗುದಾರ ಕೆಲಸ ಶುರುವಾಗಲಿದೆ.
ಅಮೆರಿಕದಲ್ಲಿರುವ ಚೀನಾ ದೇಶದ ಹಲವಾರು ಟೆಲಿಸಂಪರ್ಕ ಹಾಗೂ ಆಟೋಮೊಬೈಲ್ ಕಂಪನಿಗಳಿಗೆ ನೋಟಿಸ್ ಜಾರಿಗೊಳಿಸಲಾಗಿದ್ದು ತೆರವಿಗೆ ಗಡುವು ವಿಧಿಸಲಾಗಿದೆ. ಅಲ್ಲದೆ ಗತದಲ್ಲಿ ಈ ದೇಶದೊಂದಿಗೆ ಮಾಡಿಕೊಂಡಿದ್ದ ಕೆಲ ಪ್ರಮುಖ ಒಪ್ಪಂದಗಳಿಗೆ ಅಮೆರಿಕ ತಿಲಾಂಜಲಿ ನೀಡಿದೆ. ಮಿಗಿಲಾಗಿ 4.5 ಬಿಲಿಯನ್ ಡಾಲರ್ ಮೊತ್ತದ ವ್ಯಾಪಾರ ಒಪ್ಪಂದವನ್ನು ಅಮೆರಿಕ ಕೈ ಬಿಟ್ಟಿದೆ.