Thursday, August 18, 2022

Latest Posts

ಅಮೆರಿಕ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶನ: ಕೊನೆಗೂ ಆ ವ್ಯಕ್ತಿಯ ಗುರುತು ಪತ್ತೆ!

ಹೊಸ ದಿಗಂತ ಆನ್ ಡೆಸ್ಕ್:

ಅಮೆರಿಕ ಕ್ಯಾಪಿಟಲ್​ನಲ್ಲಿ ಟ್ರಂಪ್​ ಬೆಂಬಲಿಗರು ನಡೆಸಿದ ಹಿಂಸಾಚಾರದ ವೇಳೆ ತ್ರಿವರ್ಣ ಧ್ವಜ ಪ್ರದರ್ಶನಗೊಳಿಸುವ ಮೂಲಕ ಭಾರತೀಯರು ಆಕ್ರೋಶಕ್ಕೆ ಕಾರಣವಾದ ವ್ಯಕ್ತಿಯ ಮಾಹಿತಿ ಕೊನೆಗೂ ಸಿಕ್ಕಿದೆ.
ಇದೀಗ ಕ್ಯಾಪಿಟಲ್ ಕಟ್ಟಡದ ಎದುರು ತ್ರಿವರ್ಣ ಧ್ವಜ ಪ್ರದರ್ಶಿಸಿದ ವ್ಯಕ್ತಿ ಕೇರಳ ಮೂಲದವರು ಎಂಬ ಮಾಹಿತಿ ಲಭ್ಯವಾಗಿದ್ದು, ಕೊಚ್ಚಿಯ ಚಂಬಕ್ಕಾರದ ವಿನ್ಸೆಂಟ್ ಕ್ಸೇವಿಯರ್ ಇದರ ನೇತೃತ್ವ ವಹಿಸಿದ್ದರಂತೆ.
ಇವರು ಟ್ರಂಪ್​ಗೆ ಬೆಂಬಲ ಪ್ರದರ್ಶಿಸಲು ತ್ರಿವರ್ಣ ಧ್ವಜ ಪ್ರದರ್ಶನ ಮಾಡಿದ್ದಾರೆ. ಆದರೆ ಕ್ಯಾಪಿಟಲ್​ ಕಟ್ಟಡದ ಹಿಂಸಾಚಾರದಲ್ಲಿ ನಾನು ಭಾಗಿಯಾಗಿರಲಿಲ್ಲ ಎಂದು ವಿನ್ಸೆಂಟ್ ಕ್ಸೇವಿಯರ್​ ಹೇಳಿದ್ದಾರೆ.
ರಿಪಬ್ಲಿಕನ್​ ಪಾರ್ಟಿ ಆಫ್​ ವರ್ಜಿನೀಯಾದ ರಾಜ್ಯ ಕೇಂದ್ರ ಸಮಿತಿ ಸದಸ್ಯರಾಗಿದ್ದರು ವಿನ್ಸೆಂಟ್ ಕ್ಸೇವಿಯರ್​. ಭಾರತೀಯ ಮೂಲದ 10 ಮಂದಿ ಜೊತೆ ಸೇರಿ ತ್ರಿವರ್ಣ ಧ್ವಜ ಪ್ರದರ್ಶಿಸಿದ್ದೇನೆ ಎಂದು ​ ಹೇಳಿದರು.
ಅಮೆರಿಕ ಮತದಾನದಲ್ಲಿ ಭಾರೀ ವಂಚನೆ ನಡೆದಿದೆ ಎಂದು ಭಾವಿಸಿದ್ದ ಅಮೆರಿಕ ದೇಶಭಕ್ತರು ಒಗ್ಗಟ್ಟಿನಿಂದ ಬುಧವಾರ ರ್ಯಲಿಯಲ್ಲಿ ಭಾಗಿಯಾಗಿದ್ದರು. ಈ ವೇಳೆ ನಾನು ಕೂಡ ಅವರೊಟ್ಟಿಗೆ ಹೋದೆ. ಅಲ್ಲಿ ಕೇವಲ ಭಾರತ ಮಾತ್ರವಲ್ಲದೇ ಪಾಕ್​ ಧ್ವಜಗಳೂ ಪ್ರದರ್ಶನಗೊಂಡಿದೆ. ಆದರೆ ಶಾಂತಿಯುತ ಪ್ರತಿಭಟನೆ ನಮ್ಮ ಉದ್ದೇಶವಾಗಿತ್ತು. ಯಾರೋ ದುಷ್ಕರ್ಮಿಗಳು ಒಳಗೆ ನುಸುಳಿ ಈ ಸಮಸ್ಯೆ ಸೃಷ್ಟಿಸಿರಬಹುದು ಅಂತ ವಿನ್ಸೆಂಟ್ ಕ್ಸೇವಿಯರ್​ ಶಂಕಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!