Sunday, July 3, 2022

Latest Posts

ಅಮೆರಿಕ| 24 ಗಂಟೆಗಳಲ್ಲಿ 52 ಸಾವಿರ ಕೊರೋನಾ ಸೋಂಕಿತರು ಪತ್ತೆ

ವಾಷಿಂಗ್ಟನ್: ಅಮೆರಿಕದಲ್ಲಿ 24 ಗಂಟೆಗಳಲ್ಲಿ 52 ಸಾವಿರ ಹೊರ ಕೊರೋನಾ ಪ್ರಕರಣಗಳು ವರದಿಯಾಗಿದೆ ಎಂದು ಜೋನ್ಸ್ ಹಾಪ್ಕಿನ್ಸ್ ತಿಳಿಸಿದೆ.

ಕಳೆದ 24 ಗಂಟೆಗಳಲ್ಲಿ 50 ಸಾವಿರದ ಗಡಿದಾಟಿದ ಕೊರೋನಾ ಪ್ರಕರಣಗಳು ವರದಿಯಾಗಿದ್ದು, ಇದರಿಂದ ದೇಶದಲ್ಲಿ ಸೋಂಕಿತರ ಸಂಖ್ಯೆ 26,83,894ಕ್ಕೆ ಏರಿಕೆಯಾಗಿದೆ.

ಅಮೆರಿಕದಲ್ಲಿ ಸೋಂಕಿನಿಂದ ಮೃತಪಟ್ಟವ ಸಂಖ್ಯೆಯೂ ಏರಿಕೆಯಾಗುತ್ತಿದ್ದು, ಒಂದೇ ದಿನ 706 ಮಂದಿ ಬಲಿಯಾಗಿದ್ದು, ಮತ್ತಷ್ಟು ಆತಂಕಕ್ಕೀಡುಮಾಡಿದೆ.

ವಿಶ್ವದಲ್ಲಿ ಮಹಾಮಾರಿ ಕೊರೋನಾ ಆರ್ಭಟದಿಂದ ಬಲಿಷ್ಠ ರಾಷ್ಟ್ರಗಳು ತತ್ತರಿಸಿ ಹೋಗಿದ್ದು, ಎರಡನೇ ಸ್ಥಾನದಲ್ಲಿರುವ ಬ್ರೆಜಿಲ್ 14,53,369 ಸೋಂಕಿತರು ವರದಿಯಾಗಿದ್ದು, 60 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ರಷ್ಯಾದಲ್ಲಿ ಸೋಂಕಿತರ ಸಂಖ್ಯೆ 6,54,405ಕ್ಕೆ ಏರಿಕೆಯಾಗಿದ್ದು, 9,536 ಮಂದಿ ಮೃತಪಟ್ಟಿದ್ದಾರೆ.

ನಾಲ್ಕನೆ ಸ್ಥಾನದಲ್ಲಿರುವ ಭಾರತ ಗುರುವಾರ 6 ಲಕ್ಷ ಸೋಂಕಿತರ ಗಡಿದಾಟಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss