ಅಮೇಜಾನ್ ನ ಆರು ಮಂದಿಗೆ ಕೊರೋನಾ ಸೋಂಕು ದೃಢ: ಅಮೇರಿಕ

0
34

ನ್ಯೂಯಾರ್ಕ್: ವಿಶ್ವದಲ್ಲಿ ಕೊರೋನಾ ಸೋಂಕು ವ್ಯಾಪಕವಾಗಿದ್ದು, ಜನರು ಮನೆಯಿಂದ ಹೊರಗೆ ಹೋಗದೆ ಆನ್ ಲೈನ್ ನಲ್ಲಿ ಅವಶ್ಯಕ ವಸ್ತುಗಳನ್ನು ಖರೀದಿಸುತ್ತಿದ್ದರು, ಈ ವೇಳೆ ಅಮೆರಿಕದ ಅಮೆಜಾನ್ ನ ಗೋದಾಮಿನಲ್ಲಿ ಕಾರ್ಯ ನಿರ್ವಹಿಸುವ ಆರು ಮಂದಿಗೆ ಕೊರೋನಾ ವೈರಸ್ ತಗುಲಿದೆ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ಅಮೆರಿಕಾದ ನ್ಯೂ ಯಾರ್ಕ್ ಸಿಟಿ, ಜಾಕ್ಸನ್ ವಿಲ್ಲೆ, ಫ್ಲೋರಿಡಾ, ಒಕ್ಲಹೊಮಾ, ಬ್ರೌನ್ ಸ್ಟೌನ್, ಶೆಪೆರ್ಡ್ಸ್ ವಿಲ್ಲೆ, ಕೆಂಟುಕಿ, ಕಾಟಿ ಮತ್ತು ಟೆಕ್ಸಾಸ್ ಮಿಚಿಗನ್ ನಗರಗಳಲ್ಲಿ ಕೆಲಸ ಮಾಡುವ ಆರು ಮಂದಿಗೆ ಸೋಂಕು ದೃಢಪಟ್ಟಿದೆ.

ಅಮೇರಿಕಾ ಮಾತ್ರವಲ್ಲದೆ ಇಟಲಿ ಮತ್ತು ಸ್ಪೈನ್ ರಾಷ್ಟ್ರಗಳಲ್ಲಿ ಕಾರ್ಯ ನಿರ್ವಹಿಸುವ  ಅಮೆಜಾನ್ ಕಾರ್ಮಿಕರಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಕಾರ್ಮಿಕರ ಆರೋಗ್ಯದ ರಕ್ಷಣೆಗಾಗಿ ಕಂಪೆನಿಯಲ್ಲಿ ಕೆಲಸ ಮಾಡುವ ಸುಮಾರು 1,500 ಕಾರ್ಮಿಕರು ಮೇಲಾಧಿಕಾರಿಗಳನ್ನು ಮನವಿಮಾಡಿಕೊಂಡಿದ್ದಾರೆ.

ಆನ್ ಲೈನ್ ಮೂಲಕ ಅಗತ್ಯ ವಸ್ತುಗಳನ್ನು ಖರೀದಿಗೆ ಅವಕಾಶವಿದ್ದರೂ ಫ್ಲಿಪ್ ಕಾರ್ಟ್ ತನ್ನ ಕಾರ್ಯಚಟುವಟಿಗೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.

LEAVE A REPLY

Please enter your comment!
Please enter your name here