ಅಮೆರಿಕದಿಂದ ಬಂದ ಐವರು ಶಂಕಿತ ಕೊರೋನಾ ಸೋಂಕಿತರು ಆಸ್ಪತ್ರೆಯಿಂದ ಪರಾರಿ

0
149

ಮಹಾರಾಷ್ಟ್ರ: ಅಮೆರಿಕದಿಂದ ಭಾರತಕ್ಕೆ ಬಂದ ಐವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಕೊರೋನಾ ಭೀತಿಯಿಂದ ಆಸ್ಪತ್ರೆಗೆ ದಾಖಲಾಗಿದ್ದ ಐವರು ಪರಾರಿಯಾಗಿರುವ ಘಟನೆ ನಾಗ್ಪುರದಲ್ಲಿ ನಡೆದಿದೆ.

ನಾಗ್ಪುರದ ಮೆಯೋ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಐವರು ಕೊರೋನಾ ಶಂಕಿತರು ಪರಾರಿಯಾಗಿದ್ದು, ಈ ಐವರ ಪೈಕಿ ವೈದ್ಯಕೀಯ ಪರೀಕ್ಷೆಯಲ್ಲಿ ಓರ್ವನ ವರದಿ ಮಾತ್ರ ‘ನೆಗೆಟಿವ್’ ಬಂದಿದ್ದು, ಇನ್ನು ನಾಲ್ವಾರ ವರದಿಗೆ ಕಾಯಲಾಗುತ್ತಿದೆ.

ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು, ಪರಾರಿಯಾದ ಐವರನ್ನೂ ಪತ್ತೆಹಚ್ಚಿದ್ದಾರೆ. ಅವರನ್ನು ಶೀಘ್ರವೇ ಮತ್ತೆ ಆಸ್ಪತ್ರೆಗೆ ದಾಖಲಿಸಲಾಗುವುದು ಎಂದು ನಾಗ್ಪುರದ ಪೊಲೀಸ್ ಠಾಣೆಯ ಸಬ್ ಇನ್ಸ್ ಪೆಕ್ಟರ್ ಎಸ್. ಸೂರ್ಯವಂಶ್ ಮಾಧ್ಯಮಕ್ಕೆ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here