ವಾಷಿಂಗ್ಟನ್: ವಿಶ್ವಾದ್ಯಂತ ಕೊರೋನಾ ಸೋಂಕು ವ್ಯಾಪಕವಾಗಿದ್ದು, ಅಮೇರಿಕಾದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 1 ಲಕ್ಷ ದಾಟಿದ್ದು, ವಿಶ್ವದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಲಕ್ಷ ದಾಟಿದ ಮೊದಲ ದೇಶವಾಗಿದೆ.
ಅಮೇರಿಕಾದ ನ್ಯೂಯಾರ್ಕ್ ಪ್ರದೇಶದಲ್ಲಿ ಅತಿ ಹೆಚ್ಚಿನ ಸೋಂಕು ಪೀಡಿತರಾಗಿದ್ದು, ದೇಶದಲ್ಲಿ ಈಗಾಗಲೇ 1,700ಕ್ಕೂ ಹೆಚ್ಚು ಮಂದಿ ಸಾವನ್ನಪ್ಪದ್ದಾರೆ. ಇಟಲಿಯಲ್ಲಿ ಈಗಾಗಲೇ 9ಸಾವಿರಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ದೇಶದಲ್ಲಿ ಶೇ.10.5 ರಷ್ಟು ಕೊರೊನಾ ಸೋಂಕಿತರಿದ್ದಾರೆ.