ಹೊಸ ದಿಗಂತ ಆನ್ ಲೈನ್ ಡೆಸ್ಕ್:
ಅಯೋಧ್ಯೆಯಲ್ಲಿ ರಾಮ ಮಂದಿರಕ್ಕೆ ಭೂಮಿಪೂಜೆ ಅದ ಬಳಿಕ ಮೊದಲ ದೀಪಾವಳಿ ಸಂಭ್ರಮ. ಎಲ್ಲೆಡೆ ಅಯೋಧ್ಯ ನಗರಿ ಹಬ್ಬದ ಸಂಭ್ರಮದಲ್ಲಿದೆ.
ಈ ಬಾರಿ ಕೊಂಚ ಕೊರೋನಾ ಭೀತಿ ಇದ್ದರು, ಐದು ಲಕ್ಷ ದೀಪ ಬೆಳಗುವ ಮೂಲಕ ದಾಖಲೆ ನಿರ್ಮಾಣ ಮಾಡಲು ಅಯೋಧ್ಯೆ ತಯಾರಿ ನಡೆಸುತ್ತಿದೆ.
ಇನ್ನು ಅಯೋಧ್ಯೆಯಲ್ಲಿ ರಾತ್ರಿ ದೀಪೋತ್ಸವ ಕಾರ್ಯಕ್ರಮ ನಡೆಯಲಿದ್ದು, ಇದಕ್ಕಾಗಿ ಸಿದ್ದತೆಗಳು ಭರದಿಂದ ಸಾಗಿವೆ. ಈ ಬಾರಿ ಬರೋಬ್ಬರಿ 5 ಲಕ್ಷದ 51 ಸಾವಿರ ದೀಪಗಳನ್ನು ಅಯೋಧ್ಯೆಯಲ್ಲಿ ಬೆಳಗಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದ್ದು, ಸಿದ್ದತೆಗಳು ಭರದಿಂದ ಸಾಗಿವೆ. ದೀಪೋತ್ಸವದ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆ ಶೋಭಾಯಾತ್ರೆ ಆಯೋಜಿಸಲಾಗಿತ್ತು.
ಇತ್ತ ಅಯೋಧ್ಯೆಯಲ್ಲಿ ಇರುವ ‘ರಾಮ್ ಕಿ ಪೈಡಿ ಘಾಟ್’ ಪ್ರದೇಶವಂತೂ, ದೀಪೋತ್ಸವಕ್ಕೆ ಸಕಲ ರೀತಿಯಲ್ಲೂ ಸಜ್ಜಾಗಿದೆ. ದೀಪೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು, ದೀಪಗಳಿಂದಲೇ ರಾಮಾಯಣದ ಸನ್ನಿವೇಶಗಳನ್ನು ಚಿತ್ರಿಸಲಾಗಿದೆ.ಜೊತೆಗೆ ಹಲವಾರು ಸಾಮಾಜಿಕ ಸಂದೇಶ ಸಾರುವ ದೀಪಗಳನ್ನೂ ಇಲ್ಲಿ ಅಲಂಕರಿಸಲಾಗಿದೆ.