ಕುಶಾಲನಗರ: ಅಯೋಧ್ಯೆಯ ಭವ್ಯ ಶ್ರೀ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯ ನಿಮಿತ್ತ ಕೂಡಿಗೆ ಶ್ರೀ ಉದ್ಭವ ಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ಕೂಡಿಗೆಯ ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಸರಳವಾಗಿ ವಿಶೇಷ ಪೂಜೆ ಮತ್ತು ಜ್ಯೋತಿ ಪ್ರಜ್ವಲನ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮದ ಅಂಗವಾಗಿ ಕೂಡಿಗೆಯಿಂದ ಅಯೋಧ್ಯೆಗೆ ಕರಸೇವಕರಾಗಿ ತೆರಳಿದ್ದ ನಾಲ್ಕು ಮಂದಿಯನ್ನು ಸನ್ಮಾನಿಸಲಾಯಿತು
ಈ ಸಂದರ್ಭ ತಾಲೂಕು ಬಿ ಜೆ ಪಿ ಉಪಾಧ್ಯಕ್ಷ ಕೆ ವರದ, ಕುಶಾಲನಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಮಾಜಿ ಅಧ್ಯಕ್ಷ ಎಂ ಬಿ.ಜಯಂತ್ ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ.ಭೋಗಪ್ಪ ಪ್ರಮುಖರಾದ ಆರ್ ಕೃಷ್ಣ, ಕೇಶವ ರೈ, ಸುಬ್ಬಯ್ಯ,ಚಿಣ್ಣಪ್ಪ, ಶಶಿಕಿರಣ, ಧರ್ಮ, ಲೋಕೇಶ್, ಹರೀಶ್, ಮಹಿಳಾ ಘಟಕದ ಪ್ರಮುಖರಾದ ಸಾವಿತ್ರಿ, ಕನಕಾ, ನಿರ್ಮಲಾ, ಗೌರಿ, ಇಂದಿರಾ ಸೇರಿದಂತೆ ಹಲವಾರು ಮಂದಿ ಭಾಗವಹಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪೂಜೆಯನ್ನು ನೆರವೇರಿಸಿದರು.