ಹೊಸ ದಿಗಂತ ವರದಿ, ಕಾಸರಗೋಡು:
ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಆಶ್ರಯದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಾಲಯವಾದ ಅಭಯದಲ್ಲಿ ಭಾನುವಾರ ಜರಗಿದ ಸಮಾರಂಭದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣದ ಅಂಗವಾಗಿ ನಿಧಿ ಸಮರ್ಪಣೆಯ ಕಾಸರಗೋಡು ತಾಲೂಕು ಕಾರ್ಯಾಲಯವನ್ನು ಉದ್ಘಾಟಿಸಲಾಯಿತು.
ತಂತ್ರಿವರ್ಯ ವಿಷ್ಣುಪ್ರಕಾಶ್ ತಂತ್ರಿ ಕಾವುಮಠ ಅವರು ದೀಪ ಬೆಳಗಿಸಿ ಕಾರ್ಯಾಲಯವನ್ನು ಶುಭಾರಂಭಗೊಳಿಸಿದರು. ಆರ್ಎಸ್ಎಸ್ ಕಾಸರಗೋಡು ನಗರ ಸಂಘಚಾಲಕ್ ಕೆ.ಟಿ.ಕಾಮತ್, ವಿಶ್ವ ಹಿಂದು ಪರಿಷತ್ ನ ಕಾಸರಗೋಡು ಜಿಲ್ಲಾ ಉಪಾಧ್ಯಕ್ಷ ಎ.ಟಿ.ನಾಯ್ಕ್ , ಪಿ.ದಿನೇಶ್, ನಿಧಿ ಸಮರ್ಪಣಾ ಅಭಿಯಾನದ ಕಾಸರಗೋಡು ತಾಲೂಕು ಸಂಯೋಜಕ ಎಂ.ಅಪ್ಪಯ್ಯ ನಾಯ್ಕ್ ಮಧೂರು, ಸುರೇಶ್, ಸತೀಶ್, ದಿನೇಶ್ ನಾಗರಕಟ್ಟೆ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.