ಉಡುಪಿ: ಮುಂದಿನ ತಿಂಗಳ 5ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೂಮಿ ಪೂಜೆ ನೆರವೇರಿಸಲಿದ್ದಾರೆ. ಈ ವೇಳೆ ಕಾರ್ಯಕ್ರಮದ ಯಶಸ್ಸು ಮತ್ತು ಶೀಘ್ರ ಮಂದಿರ ನಿರ್ಮಾಣ ಕಾರ್ಯ ಹಾಗೂ ಲೋಕ ಕಲ್ಯಾಣಾರ್ಥವಾಗಿ ಪೇಜಾವರ ಮಠದ ಶ್ರೀರಾಮ ದೇವರಿಗೆ ಲಕ್ಷ ತುಲಸಿ ಅರ್ಚನೆ ನಡೆಯಲಿದೆ.
ಅಯೋಧ್ಯೆ ಶ್ರೀರಾಮ ಮಂದಿರ ತೀರ್ಥ ಕ್ಷೇತ್ರ ಟ್ರಸ್ಟ್ನ ವಿಶ್ವಸ್ಥರೂ ಆಗಿರುವ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಆ. 5ರಂದು ಉಡುಪಿ ಸಮೀಪದ ನೀಲಾವರ ಗೋಶಾಲೆಯಲ್ಲಿ ಉಪಾಸ್ಯ ದೇವರು ಶ್ರೀರಾಮವಿಠಲ ದೇವರಿಗೆ ಲಕ್ಷ ತುಲಸೀ ಅರ್ಚನೆಯನ್ನು ನಡೆಸುವುದಾಗಿ ಸಂಕಲ್ಪಿಸಿದ್ದಾರೆ. ಭಕ್ತರು ಆ. 4ರ ಮಧ್ಯಾಹ್ನ 1ಗಂಟೆಯೊಳಗೆ ಉಡುಪಿಯ ಪೇಜಾವರ ಮಠ ಅಥವಾ ನೀಲಾವರ ಗೋಶಾಲೆಗೆ ತಂದೊಪ್ಪಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ 9449082198 , 9448451023 ಮತ್ತು 9845895136 ಈ ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು ಎಂದು ಪೇಜಾವರ ಮಠದ ಪ್ರಕಟಣೆ ತಿಳಿಸಿದೆ.