ಗದಗ : ಆಯೋಧ್ಯಯಲ್ಲಿ ರಾಮ ಮಂದಿರ ನಿರ್ಮಾಣದ ಭೂಮಿ ಪೂಜಾ ಸಮಾರಂಭ ಅಂಗವಾಗಿ ವಿಶ್ವ ಹಿಂದೂ ಪರಿಷತ್, ಭಜರಂಗದಳ ಹಾಗೂ ಶ್ರೀ ಜೋಡ ಮಾರುತಿ ಯುವಕ ಮಂಡಳ ವತಿಯಿಂದ ನಗರದ ಐತಿಹಾಸಿಕ ಜೋಡ ಮಾರುತಿ ದೇವಸ್ಥಾನದ ಆವರಣದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಹಾಗೂ ರಾಮನಾಮ ಜಪ ಕಾರ್ಯಕ್ರಮ ನಡೆಯಿತು.
ನಗರದಿಂದ ಅಯೋಧ್ಯೆಗೆ ಹೋಗಿ ರಾಮ ಜನ್ಮಭೂಮಿ ಆಂದೋಲನದಲ್ಲಿ ಭಾಗವಹಿಸಿದ ನಗರ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಶ್ರೀಕಾಂತಸಾ ಖಟವಟೆ, ವಿಠಲಸಾ ಬಾಂಡಗೆ, ಪ್ರಕಾಶ್ ಬಾಂಡಗೆ ಹಾಗೂ ಗಣ್ಯರಿಂದ ಜೋಡ ಮಾರುತಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ವಕ್ತಾರರಾಗಿ ಭಜರಂಗದಳದ ಮಾಜಿ ಜಿಲ್ಲಾಧ್ಯಕ್ಷ ರವಿ ಶಿದ್ಲಿಂಗ, ಬಿಜೆಪಿ ನಗರ ಮಂಡಲದ ಪ್ರಧಾನ ಕಾರ್ಯದರ್ಶಿ ಸುದೀರ ಕಾಟಿಗರ, ಸುರೇಶ ಬಾಕಳೆ, ತುಕರಾಮ ನಾಕೋಡ, ಜೋಡು ಮಾರುತಿ ಯುವಕ ಮಂಡಳದ ಪದಾಧಿಕಾರಿಗಳಾದ ವಿನಾಯಕ ಬಾಕಳೆ, ರಾಕೇಶ ಬಾಕಳೆ, ರಾಜು ಮಲಜಿ, ದೇವಸ್ಥಾನದ ಅರ್ಚಕ ಶ್ರೀನಿವಾಸ ಪೂಜಾರಿ ಸೇರಿದಂತೆ ಮುಂತಾದವರು ಉಪಸ್ಥ್ಥಿತರಿದ್ದರು.