Saturday, August 13, 2022

Latest Posts

ಅಯೋಧ್ಯೆಯಲ್ಲಿ ಶ್ರೀರಾಮಮಂದಿರಕ್ಕೆ ಶಿಲಾನ್ಯಾಸ, ಇಡೀ ದೇಶದ ಅಪೂರ್ವ ಧಾರ್ಮಿಕ ಸಂಭ್ರಮಾಚರಣೆಯಾಗಿದೆ: ಸುತ್ತೂರು ಶ್ರೀ

ಮೈಸೂರು: ಅಯೋಧ್ಯೆಯಲ್ಲಿ ಆ.೫ ರಂದು ನಡೆಯಲಿರುವ ಶ್ರೀ ರಾಮಮಂದಿರ ಸಂಕೀರ್ಣ ನಿರ್ಮಾಣದ ಶಿಲಾನ್ಯಾಸ ಕಾರ್ಯಕ್ರಮವು ಇಡೀ ದೇಶವೇ ಸಂತೋಷ, ಸಡಗರಗಳ ಅಪೂರ್ವ ಧಾರ್ಮಿಕ ಸಂಭ್ರಮಾಚರಣೆಯಾಗಿದೆ ಎಂದು ಮೈಸೂರಿನ ಸುತ್ತೂರು ಮಠದ ಪೀಠಾಧಿಪತಿಗಳಾದ ಶ್ರೀಶಿವರಾತ್ರಿದೇಶಿಕೇಂದ್ರಸ್ವಾಮಿ ತಿಳಿಸಿದ್ದಾರೆ.
ಕೋಟಿ ಕೋಟಿ ಭಾರತೀಯರು ನೂರಾರು ವರ್ಷಗಳಿಂದ ಈ ಅಮೃತ ಕ್ಷಣಕ್ಕಾಗಿ ಕಾಯುತ್ತಿದ್ದಾರೆಂಬುದು ಅಷ್ಟೇ ನಿಜ. ಇಂಥದೊAದು ಸುವರ್ಣಾವಕಾಶವನ್ನು ಸರ್ವಸಮ್ಮತ ತೀರ್ಪಿನಿಂದ ಆಗು ಮಾಡಿಸಿದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಇಡೀ ದೇಶವೇ ಕೃತಜ್ಞತೆಯಿಂದ ಸದಾ ನೆನೆಯುತ್ತದೆ ಎಂದು ಹೇಳಿದ್ದಾರೆ.
ಶಿಲಾನ್ಯಾಸ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ವಿಶ್ವಹಿಂದು ಪರಿಷತ್ತಿನ ಕರ್ನಾಟಕ ಪ್ರಾಂತೀಯ ಪ್ರಚಾರ ಪ್ರಮುಖರಾದ ಬಸವರಾಜು, ಆರ್‌ಎಸ್‌ಎಸ್‌ನ ದಕ್ಷಿಣ ಪ್ರಾಂತ ಸಂಚಾಲಕರಾದ ಮ.ವೆಂಕಟರಾಮ್ ಮತ್ತು ಇತರೆ ಮುಖಂಡರುಗಳು ಶ್ರೀಮಠಕ್ಕೆ ಬಂದು ಆಹ್ವಾನಿಸಿದ್ದರು. ಆದರೆ ಕೋವಿಡ್ ಹಾಗೂ ಅಲ್ಲಿಯ ರಕ್ಷಣಾ ವ್ಯವಸ್ಥೆಗಳ ಕಾರಣದಿಂದಾಗಿ ಈ ಶುಭ ಸಮಾರಂಭದಲ್ಲಿ ನೇರವಾಗಿ ಭಾಗವಹಿಸುತ್ತಿಲ್ಲ. ಭಕ್ತಾಧಿಗಳೆಲ್ಲರೂ ಇರುವಲ್ಲಿಯೇ ಕಾರ್ಯಕ್ರಮವನ್ನು ವೀಕ್ಷಿಸಿ, ಧನ್ಯರಾಗಬಹುದಾಗಿದೆ ಎಂದು ತಿಳಿಸಿದ್ದಾರೆ.
ಭರತ ಖಂಡದ ಈ `ನ ಭೂತೋ ನ ಭವಿಷ್ಯತಿ ` ಎಂಬ ಐತಿಹಾಸಿಕ ಕಾರ್ಯಕ್ರಮ ಯಶಸ್ವಿಯಾಗಲಿ. ಮಂದಿರ ನಿರ್ಮಾಣ ನಿಗದಿತ ಅವಧಿಯಲ್ಲೇ ಪೂರ್ಣಗೊಳ್ಳಲೆಂದು ಸುತ್ತೂರು ಶ್ರೀಗಳು ಹಾರೈಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss