Wednesday, August 17, 2022

Latest Posts

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ: ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ

ಮೈಸೂರು: ಅಯೋಧ್ಯೆ ಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮ ನಡೆಯುತ್ತಿರುವ ಹಿನ್ನಲೆಯಲ್ಲಿ ಮೈಸೂರಿನ ಚಾಮರಾಜಪುರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ನಡೆಯಿತು.
ಭಾರತ್ ಮಾತಾ ಕೀ ಜೈ, ಕಟ್ಟುವೆವು ಕಟ್ಟುವೆವು ಶ್ರೀ ರಾಮ ಮಂದಿರ ಕಟ್ಟುವೆವು,ವಂದೇ ಮಾತಾರಂ,ಎಂಬ ಘೋಷಣೆಯೊಂದಿಗೆ ವಿಜೃಂಭಣೆಯಿಂದ ಸಂಭ್ರಮಾಚರಣೆ ನಡೆಸಿ ಸಾರ್ವಜನಿಕರಿಗೆ ಸಿಹಿ ವಿತರಿಸಲಾಯಿತು. ಶ್ರೀರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಬಿಜೆಪಿ ನಗರ ಅಧ್ಯಕ್ಷ ಶ್ರೀವತ್ಸ, ಕಳೆದ ೧೯೯೦ ಸಾಲಿನಲ್ಲಿ ಬಾಬ್ರಿ ಮಸೀದಿ ಯ ಕೆಡವಿ ರಾಮ ಮಂದಿರ ನಿರ್ಮಾಣ ಮಾಡಲೇ ಬೇಕೆಂದು ಲಕ್ಷಾಂತರ ಕಾರ್ಯಕರ್ತರ ಶ್ರಮ ಹಾಗೂ ಈ ಹೋರಾಟ ದಲ್ಲಿ ಭಾಗವಹಿಸಿ ಪ್ರಾಣ ತೆತ್ತ ಕುಟುಂಬದ ಸ್ಮರಣೆ ಮಾಡುವ ಸಮಯ ಇದಾಗಿದೆ. ೧೯೯೦ ರ ಸಮಯದಲ್ಲಿ ನಾನು ಒಬ್ಬ ಕಾರ್ಯಕರ್ತನಾಗಿ ಅಂದು ಹೋರಾಟ ಮಾಡಿದ್ದೆ, ಮೈಸೂರು ನಗರ ಅಧ್ಯಕ್ಷನಾಗಿ ಶಿಲಾನ್ಯಾಸ ಕಾರ್ಯಕ್ರಮವನ್ನು ನೋಡುತ್ತಿರುವುದು ನಿಜಕ್ಕೂ ಸಂತೋಷವಾಗುತ್ತಿದೆ ಎಂದರು.
ಅಯೋಧ್ಯೆಯಲ್ಲಿ ಇಂದು ಶಿಲಾನ್ಯಾಸ ಕಾರ್ಯ ನಡೆಯತ್ತಿರುವುದು ಭಾರತದ ೧೩೦ ಕೋಟಿ ಜನರ ಆಸೆ ಈ ಕಾರ್ಯಕೆ ಮೂಲ ರೂವಾರಿಗಳಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ.ಅಡ್ವಾನಿ,ಮುರುಳಿ ಮನೋಹರ್ ಜೋಷಿ,ಅಶೋಕ್ ಸಿಂಘಾಲ್,ಪ್ರವಿಣ್ ಬಾಯಿ ತೋಗಾಡಿಯಾ ಅಂತ ಹಿರಿಯ ನಾಯಕರ ಶ್ರಮದ ಫಲವಾಗಿದೆ.
ಇಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಶಿಲಾನ್ಯಾಸ ಕಾರ್ಯಕ್ರಮವನ್ನು ನೆರವೆರಿಸಿದ್ದು ಸಂತೋಷದ ವಿಚಾರ. ಕರ್ನಾಟಕ ದ ಸುತ್ತೂರು ನ ಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು,ಚುಂಚನಗಿರಿಯ ನಿರ್ಮಲಾ ನಂದ ಶ್ರೀ ಗಳು,ಮಾದಾರ ಚೆನ್ನಯ ಸ್ವಾಮಿಗಳು,ಉಡುಪಿಯ ಶ್ರೀ ಗಳು,ರವಿಶಂಕರ್ ಗುರೂಜಿ ಯವರನ್ನು ಅಹ್ವಾನಿಸಿ ಕರ್ನಾಟಕದ ಧಾರ್ಮಿಕತೆಯನ್ನು ಎತ್ತಿ ಇಡಿದ್ದಿದ್ದಾರೆ. ಪಕ್ಷದ ಎಲ್ಲಾ ಕಾರ್ಯಕರ್ತರು ತಮ್ಮ ತಮ್ಮ ಮನೆಗಳಲ್ಲಿ ರಾಮನ ಭಾವಚಿತ್ರಕ್ಕೆ ಪೂಜೆ ಮಾಡಿ, ರಾಮನ ಭಜನೆ ಮಾಡಬೇಕು ಮತ್ತು ಸಂಜೆಯ ಸಮಯದಲ್ಲಿ ತಮ್ಮ ತಮ್ಮ ಮನೆಯಲ್ಲಿ ಹಣತೆ ಹಚ್ಚುವ ಮೂಲಕ ಹಾಗೂ ಮನೆಯ ಥಾರಸಿಯ ಮೇಲೆ ಭಗವಧ್ವಜ ಹಾರಿಸಿ ವಿಜಯೋತ್ಸವ ಆಚರಿಸಬೇಕೆಂದು ಕರೆ ನೀಡಿದರು.
ಈ ವೇಳೆ ನಗರ ಚಾಮರಾಜ ಕ್ಷೇತ್ರದ ಶಾಸಕ ಎಲ್. ನಾಗೇಂದ್ರ, ಬಿಜೆಪಿ ನಗರಪ್ರಧಾನ ಕಾರ್ಯದರ್ಶಿ ಹೆಚ್.ಜಿ.ಗಿರಿಧರ್, ಮುಖಂಡರಾದ ಸುರೇಶ್ ಬಾಬು,ರಾಜೇಂದ್ರ,ಶಿವಕುಮಾರ್,ವಾಣೀಶ್, ರಮೇಶ್,, ರಮೇಶ್ ಕುರುಬಾರಳ್ಳಿ, ಜಯರಾಮ್,ಜೋಗಿ ಮಂಜು,ಭರತ್,ಚೇತನ್,ಜಗದೀಶ್, ಶಿವರಾಜ್,ಮಹದೇವು,ಜಗದೀಶ್,ಮಂಜು,ರಾಜೇAದ್ರ,ನಾಗರಾಜು ಮುಂತಾದವರು ಇದ್ದರು…

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!