Friday, August 12, 2022

Latest Posts

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ‌ ಶಿಲಾನ್ಯಾಸ, ವಿಹಿಂಪ ಸೇರಿ ವಿವಿಧ ಸಂಘಟನೆಗಳ ಆಶ್ರಯದಲ್ಲಿ ವಿಶೇಷ ಪೂಜೆ, ಹೋಮ, ಜಪ

ಬಳ್ಳಾರಿ: ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆ ಇಲ್ಲಿನ ಮೋತಿ ವೃತ್ತದ ಶ್ರೀರಾಮ ಮಂದಿರದಲ್ಲಿ ಬುಧವಾರ ವಿಶ್ವ ಹಿಂದೂ ಪರಿಷತ್, ಹಿಂದೂ ಜಾಗರಣ ವೇದಿಕೆ ಸೇರಿದಂತೆ ವಿವಿಧ ಸಂಘಟನೆ ಪದಾಧಿಕಾರಿಗಳು ವಿಶೇಷ ಪೂಜೆ, ಹೋಮ, ಶ್ರೀರಾಮ ನಾಮ ಜಪ ಸೇರಿ ವಿವಿಧ ಪೂಜೆಗಳನ್ನು ನೆರವೇರಿಸಿದರು. ವಿಶ್ವ ಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಪೊಲಾ ಪ್ರವೀಣ್ ಹಾಗೂ ಹಾಗೂ ಕಾರ್ಯದರ್ಶಿ ಕೆ.ಅಶೋಕ ಅವರ ನೇತೃತ್ವದಲ್ಲಿ ಇಲ್ಲಿನ ಪಂಡಿತ್ ಶ್ರೀ‌ ನಾಗರಾಜ್ ಆಚಾರ್ ಅವರು ಪೂಜೆಗಳನ್ನು ನೆರವೇರಿಸಿದರು. ಇದಕ್ಕೂ ಮುನ್ನ ನಗರ ಶಾಸಕ ಗಾಲಿ ಸೋಮಶೇಖರ ರೆಡ್ಡಿ, ವಿಎಚ್ ಪಿಯ ಅನೀಲ್ ನಾಯ್ಡು, ಶ್ರೀರಾಮುಲು ಸೇರಿದಂತೆ ವಿವಿಧ ಮುಖಂಡರು ಪೂಜೆಗಳಲ್ಲಿ ಭಾಗವಹಿಸಿ ಶ್ರೀರಾಮ ಮಂತ್ರ ಪಠಿಸಿದರು. ಬೆಳಿಗ್ಗೆಯಿಂದ ಪ್ರಾರಂಭವಾದ ಪೂಜೆ, ಹೋಮ ಹವನದಲ್ಲಿ ಶ್ರೀರಾಮ ಜಯರಾಮ ಜಯ ಜಯ ರಾಮ ಮಂತ್ರಗಳು‌ ಮೊಳಗಿದವು. ನಂತರ ಪಂಡಿತ್ ನಾಗರಾಜ್ ಆಚಾರ್ ಪೂರ್ಣಾಹುತಿ ನೆರವೇರಿಸಿದರು. ಪೂಜೆ ಹಿನ್ಮೆಲೆ ಶ್ರೀರಾಮ ದೇವರಿಗೆ ವಿಶೇಷ ಪೂಜೆ, ಅಲಂಕಾರ ಮಾಡಲಾಗಿತ್ತು. ಈ ಸಂದರ್ಭದಲ್ಲಿ ವಿಎಚ್ ಪಿಯ ಕೆ.ನಾಗೇಶ್, ಸಂಘ ಪರಿವಾರದ ಹಿರಿಯರಾದ ಶ್ರೀನಿವಾಸ್ ಜೀ, ಕೈಲಾಸ್‌ ಬಾಗ್ರೆಚಾ, ಹಿಂದೂ ಜಾಗರಣ ವೇದಿಕೆಯ ಶ್ರೀರಾಮುಲು, ದುರ್ಗಾ ವಾಹಿನಿಯ ಪ್ರಮುಖರಾದ ಜಯಲಕ್ಷ್ಮೀ, ನಿರ್ಮಲಾ, ಪಾರ್ವತಿ, ಶ್ರೀದೇವಿ ಸೇರಿದಂತೆ ಇತರರು ಉಪಸ್ಥಿತರಿದ್ದರು. ನಂತರ ಭಕ್ತರಿಗೆ‌ ತೀರ್ಥ, ಪ್ರಸಾದ ವಿತರಿಸಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss