Friday, August 12, 2022

Latest Posts

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ : ಬಳ್ಳಾರಿಯಲ್ಲಿ ಬ್ರಾಹ್ಮಣ ಒಕ್ಕೂಟದ ಪದಾಧಿಕಾರಿಗಳಿಂದ‌ ವಿಶೇಷ ಪೂಜೆ

ಬಳ್ಳಾರಿ: ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಹಿನ್ನೆಲೆಯಲ್ಲಿ, ಇಲ್ಲಿನ ಬ್ರಾಹ್ಮಣ ಒಕ್ಕೂಟದ ಪದಾಧಿಕಾರಿಗಳು ನಗರದ ಸತ್ಯನಾರಾಯಣ ಪೇಟೆಯ ಶ್ರೀ ರಾಘವೇಂದ್ರ ಸ್ವಾಮಿಗಳ ಶ್ರೀಮಠದಲ್ಲಿ ಶ್ರೀರಾಮ ದೇವರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಐತಿಹಾಸಿಕ‌ ಮಂದಿರ ನಿರ್ಮಾಣವಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭದಲ್ಲಿ ಒಕ್ಕೂಟದ ಮುಖಂಡರಾದ ಡಾ.ಶ್ರೀನಾಥ್ ಅವರು ಮಾತನಾಡಿ, ಕೋಟ್ಯಾಂತರ ಜನರ ಕನಸು ನನಸಾಗುವ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಪ್ರಧಾನ ಮಂತ್ರಿ‌ ನರೇಂದ್ರ ಮೋದಿಜಿ ಅವರು ಬುಧವಾರ ಮುನ್ನುಡಿ‌ ಬರೆದಿದ್ದಾರೆ. ಇಂದಿನಿಂದಲೇ ಐತಿಹಾಸಿಕ ದೇವಾಲಯ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ವಿಶ್ವದಲ್ಲೇ ಮೂರನೇ ಅತಿ ದೊಡ್ಡ ಹಿಂದೂ ದೇವಾಲಯವಾಗಿ ಹೊರ ಹೊರಹೊಮ್ಮಲಿದೆ. ಆದರ್ಶ ಪುರುಷ ಶ್ರೀರಾಮಚಂದ್ರನ ಇದೊಂದು ಮಂದಿರಕ್ಕಾಗಿ ಕೊಟ್ಯಾಂತರ ಜನರು ಕನಸು ಕಾಣುತ್ತಿದ್ದರು. ಅದು ಇಂದು ಸಾಕಾರಗೊಳ್ಳುತ್ತಿದೆ. ಕೊಟ್ಯಾಂತರ ಜನರಿಗೆ ಆರಾದ್ಯವಾಗಿರುವ ಶ್ರೀರಾಮನ ನಾಮವನ್ನು ಜಪಿಸುತ್ತಲೇ ಶಿಲಾನ್ಯಾಸಕ್ಕೆ ಸಾಕ್ಷಿಯಾಗೋಣ ಎಂದರು. ಈ ಸಂದರ್ಭದಲ್ಲಿ ಮುಖಂಡರಾದ ಡಿ.ಗಿರಿ, ನೇಮಕಲ್ ರಾವ್, ಮೆಡಿಕಲ್ ಶ್ರೀಧರ್ ಸೇರಿದಂತೆ ವಿವಿಧ ಪಂಡಿತರು, ಒಕ್ಕೂಟದ ಮುಖಂಡರು ಇತರರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss