Wednesday, July 6, 2022

Latest Posts

ರಾಮ ಜನ್ಮಭೂಮಿಯಲ್ಲಿ ಮತ್ತೊಂದು ಬಿಕ್ಕಟ್ಟು: ಅಯೋಧ್ಯೆಯಲ್ಲಿ ಭೌದ್ಧ ಬಿಕ್ಕುಗಳ ಧರಣಿ

ಅಯೋಧ್ಯೆ: ಶ್ರೀ ರಾಮನ ಭವ್ಯ ದೇವಾಲಯ ನಿರ್ಮಾಣದ ಕಾಮಗಾರಿಗಳನ್ನು ಪ್ರಾರಂಭಿಸಲು ಸಿದ್ಧತೆಗಳು ನಡೆಯುತ್ತಿರುವ ವೇಳೆಯಲ್ಲಿ ಬೌದ್ಧ ಅನುಯಾಯಿಗಳು ರಾಮ ಜನ್ಮಭೂಮಿ ಭೌದ್ಧರ ಸ್ಥಳ ಎಂದು ಮಂಗಳವಾರ ಅಯೋಧ್ಯೆ ತಲುಪಿ UNESCO ಮೇಲ್ವಿಚಾರಣೆಯ ಉತ್ಖನನಕ್ಕೆ ಕರೆ ನೀಡಿದರು.

ಬಿಹಾರದ ಪೂರ್ವ ಚಂಪಾರನ್‌ನಿಂದ ಅಯೋಧ್ಯೆಯನ್ನು ತಲುಪಿದ ಇಬ್ಬರು ಬೌದ್ಧ ಭಿಕ್ಷುಗಳು ಅಯೋಧ್ಯೆಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಕಚೇರಿ ಬಳಿ ಉಪವಾಸ ಸತ್ಯಾಗ್ರಹ ನಡೆಸಿದ್ದಾರೆ, ರಾಮ ಜನ್ಮಭೂಮಿ ಸಂಕೀರ್ಣವು ಬೌದ್ಧ ತಾಣ ಎಂದು ಹೇಳಿದ್ದಾರೆ.

ರಾಮ ಜನ್ಮಭೂಮಿಯಲ್ಲಿ ದೊರೆತ ಅವಶೇಷಗಳು ಅಯೋಧ್ಯೆ ಒಂದು ಕಾಲದಲ್ಲಿ ಪ್ರಾಚೀನ ಬೌದ್ಧ ನಗರವಾದ ಸಾಕೆತ್ ಎಂಬುದಕ್ಕೆ ಸಾಕ್ಷಿ ಎಂದು ಆಜಾದ್ ಬೌದ್ಧ ಧರ್ಮ ಸೇನೆಯ ಮುಖ್ಯಸ್ಥ ಭಂತೇಯ ಬುದ್ಧ ಶರಣ್ ಕೇಸರಿಯಾ ಹೇಳುತ್ತಾರೆ.  ಇದನ್ನು ಲೋಮಶ್ ಋಷಿ ಮುನಿ ಸ್ಮರಣಾರ್ಥ ಕೌಶಲ್ ನರೇಶ್ ರಾಜ ಪ್ರಸೇನ್‌ಜಿತ್ ಸ್ಥಾಪಿಸಿದ್ದರು ಎಂದು ಹೇಳಿದ್ದಾರೆ.

ರಾಮ ಜನ್ಮಭೂಮಿ ಸಂಕೀರ್ಣವನ್ನು ನೆಲಸಮಗೊಳಿಸುವಾಗ ಕಂಡುಬಂದ ಪ್ರಾಚೀನ ಪ್ರತಿಮೆಗಳು ಮತ್ತು ಚಿಹ್ನೆಗಳ ಬಗ್ಗೆ ವಿವಾದಗಳು ಹುಟ್ಟಿಕೊಂಡವು. ಅಖಿಲ ಭಾರತ ಆಜಾದ್ ಬೌದ್ಧ ಧರ್ಮ ಸೇನೆಯು ರಾಮ ಜನ್ಮಭೂಮಿಯ ಉತ್ಖನನದ ಸಮಯದಲ್ಲಿ ಪತ್ತೆಯಾದ ವಸ್ತುಗಳನ್ನು ಸಂರಕ್ಷಿಸಬೇಕೆಂದು ಒತ್ತಾಯಿಸಿದೆ.

ಯುನೆಸ್ಕೋ ರಕ್ಷಣೆಯಲ್ಲಿ ರಾಮ್ ಜನ್ಮಭೂಮಿ ಸ್ಥಳವನ್ನು ಉತ್ಖನನ ಮಾಡಲು ಅನುಮತಿ ನೀಡಬೇಕು ಎಂದು ಒತ್ತಾಯಿಸಿದರು.

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss