Monday, August 15, 2022

Latest Posts

ಮಥುರಾ| ಅಯೋಧ್ಯೆಯ ಬಳಿಕ ಈಗ ಶ್ರೀಕೃಷ್ಣ ಜನ್ಮಭೂಮಿ ಸಂಕೀರ್ಣದಲ್ಲಿರುವ ಮಸೀದಿ ತೆರುವುಗೊಳಿಸಲು ಕೋರಿ ಕೋರ್ಟ್ ಗೆ ಅರ್ಜಿ

ಮಥುರಾ: ಶ್ರೀಕೃಷ್ಣ ಜನ್ಮಭೂಮಿ ಜಮೀನಿನ ಸಂಪೂರ್ಣ 13.37 ಎಕರೆ ಭೂಮಿಯ ಮಾಲೀಕತ್ವ ಹಿಂದೂಗಳದ್ದು ಎಂದು ವಕೀಲರಾದ ಹರಿಶಂಕರ್ ಜೈನ್ ಮತ್ತು ವಿಷ್ಣು ಜೈನ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.

ಮಥುರಾದಲ್ಲಿರುವ ಕೃಷ್ಣ ದೇವಾಲಯ ಸಂಕೀರ್ಣದ ಪಕ್ಕದಲ್ಲಿರುವ ಶಾಹಿ ಇಡ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ಶ್ರೀಕೇಷ್ಣ ನ ಜನ್ಮ ಭೂಮಿಯನ್ನು ಕೆಲವರ ಸಹಾಯದಿಂದ ಈದ್ಗಾ ಟ್ರಸ್ಟ್ ಅತೀಕ್ರಮಣ ಮಾಡಿ ಅಲ್ಲಿ ಈದ್ಗ ಮಸೀದಿ ನಿರ್ಮಿಸಲಾಗಿದೆ ಎಂದು ಮೊಕದ್ದಮೆ ಹಾಕಲಾಗಿದೆ.

ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತೀರ್ಪು ನೀಡಿದ್ದು, ಆ.5ರಂದು ರಾಮಜನ್ಮಭೂಮಿಯ ಶಿಲಾನ್ಯಾಸ ನಡೆದಿದ್ದು, ರಾಮ ಮಂದಿರ ನಿರ್ಮಾಣ ಕಾರ್ಯ ಈಗಾಗಲೇ ಪ್ರಾರಂಭವಾಗಿರುವ ನಡುವೆ ಮಥುರಾದ ಶ್ರೀ ಕೃಷ್ಣ ಜನ್ಮ ಭೂಮಿ ಸಂಕೀರ್ಣದಲ್ಲಿರುವ ಮಸೀದಿ ತೆರವುಗೊಳಿಸುವ ಕುರಿತು ಕೆಲಸ ಚುರುಕುಗೊಂಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss