Monday, August 8, 2022

Latest Posts

ಅಯೋಧ್ಯೆ ರಾಮ ಮಂದಿರದ ಭೂಮಿ ಪೂಜೆಗೆ ರಾಮ ಲಲ್ಲಾನ ಉಡುಪು ಹೇಗಿರುತ್ತೆ ಗೊತ್ತೇ? ಇಲ್ಲಿದೆ ನೋಡಿ

ಅಯೋಧ್ಯೆ: ರಾಮ ಜನ್ಮ ಭೂಮಿಯಲ್ಲಿ ನಿರ್ಮಾಣವಾಗುತ್ತಿರುವ ಭವ್ಯ ಹಾಗೂ ಬೃಹತ್ ರಾಮ ಮಂದಿರದ ಭೂಮಿ ಪೂಜೆಯಲ್ಲಿ ರಾಮ ಲಲ್ಲಾ ನ ಉಡುಪು ಅದ್ಭುತವಾಗಿ ರೂಪುಗೊಳ್ಳುತ್ತಿದ್ದೆ.

ಎಲ್ಲರೂ ಶ್ರೀರಾಮನ ದೇಗುಲದ ನಿರ್ಮಾಣದ ನೀಲಿನಕ್ಷೆ ನೋಡುತ್ತಿರುವ ನಡುವೆ ರಾಮಲಲ್ಲಾನ ಉಡುಪು ತಯಾರಾಗುತ್ತಿದೆ. ಹಸಿರು ಮತ್ತು ಕೇಸರಿ ಬಣ್ಣಗಳನ್ನು ಹೊಂದಿರುವ ವೆಲ್ವೆಟ್ ಬಟ್ಟೆಯಿಂದ ರಾಮ ಲಲ್ಲಾನ ವಸ್ತ್ರ ತಯಾರಾಗುತ್ತಿದೆ.

ಆಗಸ್ಟ್ 5 ರಂದು ನಡೆಯಲಿರುವ ಭೂಮಿ ಪೂಜೆಗೆ ರಾಮನ ಮೂರ್ತಿಗೆ ಹಸಿರು ಬಣ್ಣದ ಬಟ್ಟಗೆ ಕೇಸರಿ ಬಾರ್ಡರ್ ಲುಕ್ ನೀಡುವ ವಸ್ತ್ರ ತಯಾರಾಗುತ್ತಿದೆ. ರಾಮನ ವಸ್ತ್ರಕ್ಕೆ ನವರತ್ನಗಳನ್ನು ಬಳಸಲಾಗುತ್ತಿದೆ.

ರಾಮನನ್ನು ವಾರದ ವಿವಿಧ ದಿನಗಳಲ್ಲಿ ಅಲಂಕರಿಸಲು ವಿವಿಧ ಬಣ್ಣದ ಬಟ್ಟೆಗಳನ್ನು ಬಳಸಲಾಗುತ್ತದೆ. ಸೋಮವಾರ, ರಾಮಲಲ್ಲಾ ಬಿಳಿ ಬಣ್ಣದ ಬಟ್ಟೆಗಳನ್ನು ಧರಿಸಿದರೆ, ಮಂಗಳವಾರ ಕೆಂಪು, ಬುಧವಾರ ಹಸಿರು, ಗುರುವಾರ ಕಿತ್ತಳೆ, ಶುಕ್ರವಾರ ಕೆನೆ, ಶನಿವಾರ ನೀಲಿ ಮತ್ತು ಭಾನುವಾರ ರಾಮಲಲ್ಲಾ ಗುಲಾಬಿ ಬಣ್ಣದ್ದಾಗಿದೆ.

ರಾಮಲಲ್ಲಾ ಬಟ್ಟೆಗಳನ್ನು ಹೊಲಿಯಲು ‘ಬಾಬು ಲಾಲ್ ಟೈಲರ್ಸ್’ ನಿರತರಾಗಿದ್ದಾರೆ. ಭಗವತ್ ಪ್ರಸಾದ್ ಹಾಗೂ ಶಂಕರ್ ಲಾಲ್ ದೇವರ ಬಟ್ಟೆಯನ್ನು ಹೊಲಿಯುತ್ತಿದ್ದಾರೆ. ಸುಮಾರು 4 ತಲೆಮಾರುಗಳಿಂದ ಅಯೋಧ್ಯೆ ರಾಮ ಲಲ್ಲಾಗೆ ಇವರು ಬಟ್ಟೆ ತಯಾರು ಮಾಡುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss