ಹೊಸ ದಿಗಂತ ವರದಿ, ಚಿಕ್ಕಮಗಳೂರು:
ಅಯೋಧ್ಯೆ ರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ರಾಮ ಭಕ್ತರು ರಾಮನ ಬಂಟನಂತೆ ಕಾರ್ಯನಿರ್ವಹಿಸಬೇಕು ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಿವಮೊಗ್ಗ ವಿಭಾಗ ಪ್ರಚಾರಕ್ ಬಾಲಕೃಷ್ಣ ಕಿಣಿ ಕರೆ ನೀಡಿದರು.
ನಗರದ ಬಸವನಹಳ್ಳಿ ಸರ್ಕಾರಿ ಬಾಲಿಕ ಶಾಲೆಯಲ್ಲಿ ರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಶ್ರೀ ರಾಮ ಮಂದಿರ ನಿಧಿ ಸಮರ್ಪಣಾ ಅಭಿಯಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಭಾರತವೇ ರಾಮ, ರಾಮನ ಜೀವನವೆ ಭಾರತೀಯ ಸಂಸ್ಕøತಿ ರಾಮನ ಪ್ರತಿಯೊಂದು ಹೆಜ್ಜೆ, ಪ್ರತಿದಿನದ ಜೀವನಶೈಲಿ ನಮಗೆ ಇಂದು ಆದರ್ಶವಾಗಿದ್ದು ಜನಮಾನಸದಲ್ಲಿ ಮತ್ತೊಮ್ಮೆ ಪ್ರತಿಷ್ಠಾಪನೆ ಮಾಡಬೇಕು ಎಂದು ತಿಳಿಸಿದರು.
ರಾಮ ಹೇಗೆ ಈಡೀ ದೇಶದ ಜನರನ್ನು ಜೋಡಿಸಿದ, ರಾಮಸೇತು ಕಟ್ಟಬೇಕಾದರೆ ಕಪಿ ಸೈನ್ಯ ಹೇಗೆ ಸೇರಿತೊ ಹಾಗೆ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯವೂ ಆಗಬೇಕು. ದೇಶದ ಎಲ್ಲ ಸಮಾಜ, ಜಾತಿ, ಮತಗಳು ರಾಮನ ಹೆಸರಿನಲ್ಲಿ ಒಂದಾಗಬೇಕು. ಈ ದೇಶದಲ್ಲಿ ಹುಟ್ಟಿದ ಪ್ರತಿಯೊಬ್ಬನೂ ಹಿಂದೂಗಳೆ ಈ ಸಲುವಾಗಿ ಎಲ್ಲಾ ಮನೆಗಳಿಗೆ ಹೋಗಬೇಕು. ಎಂದರು.
ರಾಮ ಇಲ್ಲದೆ ಈ ರಾಷ್ಟ್ರವಿಲ್ಲ. ದೇಶದ ಆರಾಧ್ಯಪುರುಷ ರಾಮ, ಕೃಷ್ಣರನ್ನು ಜನರು ಒಪ್ಪುವರು, ಪ್ರಕೃತಿಯನ್ನು ಪೂಜಿಸಿ ನೀರನ್ನು ಗಂಗಾಮಾತಾ ಎನ್ನುವವರು, ಈ ದೇಶದ ಕಲ್ಪನೆ ಯಾರು ಇಟ್ಟುಕೊಳ್ಳುತಾರೊ ಅವರೆಲ್ಲರೂ ಹಿಂದೂಗಳೆ. ಜಾತಿ ಮತ ಬೇರೆ ಇದ್ದರೂ ರಾಮನ ಹೆಸರಿನಲ್ಲಿ ಮತ್ತೊಮ್ಮೆ ದೇಶ ಒಂದಾಗಬೇಕು. ವಿವಿಧ ರಾಜಕೀಯ ಪಕ್ಷಗಳಿದ್ದರೂ ರಾಮನ ಹೆಸರಿನಲ್ಲಿ ಯಾವುದೆ ಬಿನ್ನಾಭಿಪ್ರಾಯವಿಲ್ಲ ಎಂದು ಹೇಳಿದರು.
ಹಿರಿಯರು ಈ ಬಗ್ಗೆ ಯೋಚನೆ ಮಾಡುತ್ತ ತರುಣ ಪೀಳಿಗೆಗೆ ರಾಮನ ಬಗ್ಗೆ ತಿಳಿಸಿ ಅದು ಈ ಸಮಾಜದಲ್ಲಿ ಆಳವಾಗಿ, ಭದ್ರವಾಗಿ ಬೇರೂರಬೇಕೆಂದು ನಿಧಿ ಸಮರ್ಪಣಾ ಅಭಿಯಾನವನ್ನು ಹಮ್ಮಿಕೊಂಡಿದ್ದಾರೆ. ಮಂದಿರ ನಿರ್ಮಾಣಕ್ಕೆ ಹಣ ಸಂಗ್ರಹ ಮಾಡುವ ಉದ್ದೇಶ ಮಾತ್ರ ನಮ್ಮ ಕೆಲಸವಲ್ಲ. ರಾಮ ಮಂದಿರ ರಾಷ್ಟ್ರ ಮಂದಿರವಾಗಿ ನಿರ್ಮಾಣವಾಗಬೇಕು, ಸಾಂಸ್ಕøತಿಕ ಕೇಂದ್ರವಾಗಬೇಕೆಂಬುದು ಇದರ ಹಿಂದಿರುವ ಹಿರಿಯರ ಚಿಂತನೆ ಎಂದರು.
ಈಡೀ ಪ್ರಪಂಚಕ್ಕೆ ಭಾರತದ ಜೀವನ, ಇತಿಹಾಸವನ್ನು ಮಂದಿರದ ಮೂಲಕ ತಿಳಿಸಬೇಕೆಂಬ ಯೋಚನೆ ಈ ಕಾರ್ಯಕ್ರಮದ್ದಾಗಿದ್ದು ಮನೆಮನೆಯ ಸಂಪರ್ಕ ಅಭಿಯಾನವನ್ನು ಮಾಡಲಾಗುತ್ತಿದೆ ಎಂದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ವಿಭಾಗ ವ್ಯವಸ್ಥಾ ಪ್ರಮುಖ್ ಮಲ್ಲಿಕಾರ್ಜುನ್ ರಾವ್, ನಗರ ಸಂಚಾಲಕ್ ಸ.ಗಿರಿಜಾ ಶಂಕರ್, ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಶ್ರೀಕಾಂತ ಪೈ ವೇದಿಕೆಯಲ್ಲಿದ್ದರು.