Tuesday, July 5, 2022

Latest Posts

ಅಯೋಧ್ಯೆ ಶ್ರೀರಾಮ ಕ್ಷೇತ್ರ ನಿರ್ಮಾಣ: ಕೇರಳದಲ್ಲಿ ಜ.31ರಿಂದ ಮಹಾ ಸಂಪರ್ಕ ಕಾರ್ಯಕ್ರಮ

ಹೊಸ ದಿಗಂತ ವರದಿ, ಕಾಸರಗೋಡು:

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಎಲ್ಲಾ ಭಕ್ತರನ್ನು ಸೇರಿಸಿಕೊಳ್ಳುವ ಸಲುವಾಗಿ ಜನವರಿ 31ರಿಂದ ಫೆಬ್ರವರಿ 28ರ ವರೆಗೆ ಕೇರಳದಲ್ಲಿ ಮಹಾ ಸಂಪರ್ಕ ಅಭಿಯಾನ ಕಾರ್ಯಕ್ರಮವು ನಡೆಯಲಿರುವುದಾಗಿ ವಿಶ್ವ ಹಿಂದು ಪರಿಷತ್‌ನ ರಾಷ್ಟ್ರೀಯ ಕಾರ್ಯದರ್ಶಿ ಜನರಲ್ ಮಿಲಿಂದ್ ಪರಾಂದೆ ಕೊಚ್ಚಿಯಲ್ಲಿ ನಡೆದ ಸುದ್ಧಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅದರಂತೆ ರಾಜ್ಯದಲ್ಲಿ 14,200 ಸ್ಥಳಗಳಲ್ಲಾಗಿ 14 ಲಕ್ಷ ಕುಟುಂಬಗಳನ್ನು ನೇರವಾಗಿ ಭೇಟಿ ಮಾಡಲು ನಿರ್ಧರಿಸಲಾಗಿದೆ. ಸನ್ಯಾಸಿಗಳು, ಹಿಂದು ಸಂಘಟನೆಗಳ ನೇತಾರರು ಈ ಮಹಾ ಸಂಪರ್ಕ ಕಾರ್ಯಕ್ರಮಕ್ಕೆ ನೇತೃತ್ವ ವಹಿಸುವರು. ದೇಶದಾದ್ಯಂತ ಭಕ್ತರನ್ನು ನೇರವಾಗಿ ಸಂಪರ್ಕಿಸಿ ಶ್ರೀರಾಮ ಮಂದಿರ ನಿರ್ಮಾಣ ಕಾರ್ಯದಲ್ಲಿ ಭಾಗಿಯಾಗುವಂತೆ ಮಾಡಲು ಶ್ರೀರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನ ಪ್ರಮುಖರು ವಿಶ್ವ ಹಿಂದು ಪರಿಷತ್‌ನ ಪ್ರಮುಖರಲ್ಲಿ ವಿನಂತಿಸಿದ್ದರು. ಈ ಹಿನ್ನೆಲೆಯಲ್ಲಿ ಕೇರಳದಲ್ಲಿ ಮಹಾಸಂಪರ್ಕ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಜನವರಿ 15ರಂದು ರಾಷ್ಟ್ರೀಯ ಮಟ್ಟದಲ್ಲಿ ಸಂರ್ಪಕ ಅಭಿಯಾನವನ್ನು ಆರಂಭಿಸಲಾಗುವುದು. ಅದರಂತೆ ಅಭಿಯಾನವನ್ನು ಕೇರಳದ ಎಲ್ಲಾ 14 ಜಿಲ್ಲೆಗಳಲ್ಲೂ ನಡೆಸಲಾಗುವುದು. ಅಯೋಧ್ಯೆಯಲ್ಲಿ ಕ್ಷೇತ್ರ ನಿರ್ಮಾಣಕ್ಕೆ ಅಗತ್ಯವುಳ್ಳ ಧನ ಸಂಗ್ರಹ ಕಾರ್ಯವು ಈ ಸಂದರ್ಭದಲ್ಲಿ ನಡೆಯಲಿದೆ ಎಂದು ವಿಹಿಂಪ ರಾಷ್ಟ್ರೀಯ ಕಾರ್ಯದರ್ಶಿ ತಿಳಿಸಿದರು.
ವಿಶ್ವ ಹಿಂದು ಪರಿಷತ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ.ಆರ್.ರಾಜಶೇಖರನ್, ಸ್ವಾಮೀ ಸತ್ಯರೂಪಾನಂದ ಸರಸ್ವತೀ, ಎಸ್.ಸಂಜಯನ್, ಎಸ್.ಸುಭಾಶ್‌ಚಂದ್ ಮುಂತಾದವರು ಸುದ್ಧಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss