Saturday, August 13, 2022

Latest Posts

ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣ: ಕೇಂದ್ರ ಸಚಿವರಿಂದ ನಿಧಿ ಹಣ ಸ್ವೀಕಾರ

ಹೊಸ ದಿಗಂತ ವರದಿ,ಧಾರವಾಡ:

ಉತ್ತರಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ ನಿದಿ ಸಮರ್ಪಣಾ ಅಭಿಯಾನದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಪಾಲ್ಗೊಂಡು, ಧಾರವಾಡದ ವಿವಿಧ ಬಡಾವಣೆಗಳ ಸಮಾಜದ ಗಣ್ಯರಿಂದ ಶುಕ್ರವಾರ ನಿಧಿ ಹಣ ಸ್ವೀಕಾರ ಮಾಡಿದರು.
ಧಾರವಾಡದ ಕ್ರಿಶ್ಚಿಯನ್ ಸಮುದಾಯದ ಪ್ರಮುಖರು ಸ್ಟೀವ್ ಅಬ್ರಹಾಂ ರೂ.1ಲಕ್ಷ, ರಾಜ್ಯ ನೌಕರ ಸಂಘದ ರಾಷ್ಟ್ರೀಯ ಉಪಾಧ್ಯಕ್ಷ ಬಸವರಾಜ ಗುರಿಕಾರ ರೂ.1ಲಕ್ಷ, ಮಧುಸೂಧನ ಕುಲಕರ್ಣಿ ರೂ.50 ಸಾವಿರ, ರವಿ ದೇಶಪಾಂಡೆ ರೂ.50 ಸಾವಿರ ನಿಧಿ ಸಮರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಶ್ರೀರಾಮ ಭಾರತದ ಅಸ್ಮಿತೆ. ದೇಶದ ಸರ್ವ ಧರ್ಮಿಯರು ಒಗ್ಗೂಡಿ ಈ ಭವ್ಯ ಮಂದಿರ ನಿರ್ಮಾಣಕ್ಕೆ ಸಂಕಲ್ಪ ಮಾಡಬೇಕು. ಸರ್ವರೂ ಮಂದಿರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಶಾಸಕರು ಅರವಿಂದ ಬೆಲ್ಲದ ಅಮೃತ ದೇಸಾಯಿ, ಡಾ. ಎಸ್.ಆರ್.ರಾಮನಗೌಡರ, ಪೂರ್ಣಾ ಪಾಟೀಲ, ಸಿ.ಎಸ್.ಪಾಟೀಲ, ನೌಕರ ಸಂಘದ ಜಿಲ್ಲಾಧ್ಯ ಸಿದ್ದನಗೌಡರ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss