Sunday, August 14, 2022

Latest Posts

ಅಯೋಧ್ಯೆ ಶ್ರೀರಾಮ ಮಂದಿರ ಭೂಮಿ ಪೂಜೆ: ಸಿದ್ಧೇಶ್ವರ ದೇವಸ್ಥಾನದಲ್ಲಿ ಶ್ರೀರಾಮನಿಗೆ ವಿಶೇಷ ಪೂಜೆ

ವಿಜಯಪುರ: ನಗರದ ಸಿದ್ಧೇಶ್ವರ ದೇವಸ್ಥಾನದಲ್ಲಿ ವಿಶ್ವ ಹಿಂದೂ ಪರಿಷತ್, ಬಜರಂಗ ದಳ ವತಿಯಿಂದ ಬುಧವಾರ ಅಯೋಧ್ಯೆ ಶ್ರೀರಾಮ ಜನ್ಮ ಭೂಮಿಯಲ್ಲಿ ರಾಮ ಮಂದಿರ ಭೂಮಿ ಪೂಜೆ ನಿಮಿತ್ತ ಶ್ರೀರಾಮನ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು.
ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸ್ವಾಮೀಜಿಗಳು ಆಶೀರ್ವಚನ ನೀಡಿ, ಜಗತ್ತಿನಲ್ಲಿ ಭಾರತ ಸಹಿತವಾಗಿ ಆ.5ರ ಶುಭ ದಿನವನ್ನು ಸುವರ್ಣಾಕ್ಷರಗಳಿಂದ ಬರೆದಿಡುವುದಾಗಿದೆ. ಭಾರತ ದೇಶದ ಚೇತನಾ ಸ್ಥಳ ಆಗಿರುವ ಅಯೋಧ್ಯೆಯಲ್ಲಿ ರಾಮ ಜನ್ಮ ಭೂಮಿ ಪ್ರದೇಶದಲ್ಲಿ ಭವ್ಯವಾದ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಭೂಮಿ ಪೂಜೆ ಸರ್ವ ವಿಧಿತದ ನಿರ್ಧಾರದಂತೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದರು.
ರಾಮ ಸಮಿತಿಯ ಮಂಚಾಲೇಶ್ವರಿ ಮಾತನಾಡಿ, ರಾಮಮಂದಿರ ದೇಶದ ಕೋಟಿ ಕೋಟಿ ಹಿಂದೂಗಳ ಸಹಿತ, ಅಲ್ಲದೆ ಎಲ್ಲ ಪಂಥ ಮತ್ತು ಜಾತಿಯ ಅನುಯಾಯಿಗಳ ಆಶಯವಾಗಿದೆ. ಭಾರತದ ಸನಾತನ ಉಜ್ವಲ ರಾಷ್ಟç ಜೀವನದ ಮೇಲೆ ವಿಶ್ವಾಸ ಮತ್ತು ಶ್ರದ್ಧೆ ಇದೆಯೆಂದು ಹೇಳಿದರು.
ಉತ್ತರ ಪ್ರಾಂತ ಪ್ರಮುಖ ಸುನೀಲ ಭೈರವಾಡಗಿ ಮಾತನಾಡಿ, 1528ರಲ್ಲಿ ಬಾಬರನ ಸೈನಾಪತಿಯಾದ ಮೀರ್ಬಾಕಿ ಇವನು ವಿಕ್ರಮಾದಿತ್ಯ ಮಹಾರಾಜನು ಏಳು ಅಂತಸ್ತಿನ ಭವ್ಯ ಮಂದಿರವನ್ನು ನಿರ್ಣಾಮ ಮಾಡಿ ಮಸೀದಿ ಕಟ್ಟಿಸಿದನು. ಅಲ್ಲಿಯಿಂದ ಇವತ್ತಿನವರೆಗೆ 492ವರ್ಷ ಸುದೀರ್ಘ ಹೋರಾಟದ ಫಲವಾಗಿ ಇಂದು ರಾಮಜನ್ಮ ಭೂಮಿಯಲ್ಲಿ ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯರಂಭ ನೆರವೇರುತ್ತಿದೆ. ಅಯೋಧ್ಯೆಯು ಪತಿತ ಪಾವನ ಸರಯೂ ನದಿಯ ದಡದಲ್ಲಿರುವ ಒಂದು ಪವಿತ್ರ ನಗರವಾಗಿದೆ. ಮರ್ಯಾದ ಪುರುಷೋತ್ತಮ ಆಳಿದ ನಗರ ಅಯೋಧ್ಯವಾಗಿದೆ. ಶ್ರೀರಾಮ ಆಳಿದ ಅಯೋಧ್ಯ ಕೂಡ ಈ ಮೃತ್ಯುಂಜ್ಯಯ ಸಂಸ್ಕೃತಿಯ ಅಮೀತ ಹಸ್ತಾಕ್ಷರವಾಗಿದೆ ಎಂದರು.
ಶಂಕರಾನಂದ ಸ್ವಾಮೀಜಿ ಮಾತನಾಡಿದರು.
ಇದೇ ಸಂದರ್ಭ ಡಿ.6, 1992ರ ಕರಸೇವಕರ ಘಟನೆಯಲ್ಲಿ ಭಾಗವಹಿಸಿದ ಮಹೇಶ ಚವ್ಹಾಣ, ಬಾಬು ಶಿರಶ್ಯಾಡ ತಮ್ಮ ಅನುಭವಗಳನ್ನು ಹಂಚಿಕೊಂಡರು.
ಮಾತೃಶಕ್ತಿಯ ಮಾಯಕ್ಕ ಚೌಧರಿ ರಾಮ ಭಜನೆ ಮತ್ತು ರಾಮ ತಾರಕ ಮಂತ್ರ ಹೇಳಿಕೊಟ್ಟರು. ಅನಂತರ ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿದರು. ವಿಶ್ವಹಿಂದೂ ಪರಿಷತ್ ಜಿಲ್ಲಾಧ್ಯಕ್ಷ ಬಸಯ್ಯ ಹಿರೇಮಠ, ವೀರಶೈವ ಮಹಾಸಭಾದ ಅಧ್ಯಕ್ಷ ಸಿದ್ರಾಮಪ್ಪ ಉಪ್ಪಿನ, ಪ್ರಕಾಶ ಕಡೆಚೂರ, ವಿಡಿಎ ಅಧ್ಯಕ್ಷ ಶ್ರೀಹರಿ ಗೊಳಸಂಗಿ, ರಾಘವ ಅಣ್ಣಿಗೇರಿ, ಗುರು ಗಚ್ಚಿನಮಠ, ರಾಮನವಮಿ ಉತ್ಸವ ಸಮಿತಿ ಉಮೇಶ ವಂದಾಲ, ಈರಣ್ಣ ಹಳ್ಳಿ, ದೇವಕಾಂತ ನಾವಿ ಇದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss