Tuesday, September 22, 2020
Tuesday, September 22, 2020

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಅಯೋಧ್ಯೆ ಶ್ರೀ ರಾಮ ಮಂದಿರಕ್ಕಾಗಿನ ಶ್ರೀವಿಶ್ವೇಶತೀರ್ಥರ ಹೋರಾಟದ ಬಗ್ಗೆ ಮಾತನಾಡಿದರು ಪೇಜಾವರ ಶ್ರೀಗಳು

sharing is caring...!

ಉಡುಪಿ: ಪೇಜಾವರ ಶ್ರೀವಿಶ್ವೇಶತೀರ್ಥ ಸ್ವಾಮೀಜಿ ತಮ್ಮ ಜೀವನವೇ ಅಯೋಧ್ಯೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಎಂಬಂತೆ ಬದುಕಿದವರು. ಅಯೋಧ್ಯೆಯ ಪ್ರಮುಖ ಘಟನೆಗಳೂ ಅವರ ನೇತೃತ್ವದಲ್ಲೇ ನಡೆದಿವೆ. ಕಳೆದ ವರ್ಷ ನವೆಂಬರ್ 9ರಂದು ಅಯೋಧ್ಯೆ ಕುರಿತ ಐತಿಹಾಸಿಕ ತೀರ್ಪು ಬಂದಾಗ ಭಾವುಕರಾಗಿ ಆನಂದ ಬಾಷ್ಪ ಸುರಿದವರು, ತಮ್ಮ ಜೀವನ ಸಾರ್ಥಕವಾಯ್ತು ಎಂದು ಹೇಳಿದವರು, ಕೆಲವೇ ದಿನಗಳಲ್ಲಿ ರಾಮನಲ್ಲಿಗೆ ನಡೆದೇ ಬಿಟ್ಟರು. ಇದೀಗ ಅವರ ಕರಕಮಲ ಸಂಜಾತ ಶಿಷ್ಯ ಪೇಜಾವರ ಮಠಾಧೀಶ ಶ್ರೀವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಅಯೋಧ್ಯೆಯ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿದ್ದಾರೆ. ಭವ್ಯ ರಾಮಮಂದಿರಕ್ಕೆ ಭೂಮಿ ಪೂಜನ ನಡೆಯುವ ಸುಸಂದರ್ಭದಲ್ಲಿ ಪೇಜಾವರ ಶ್ರೀಗಳು “ಹೊಸದಿಗಂತ”ದೊಂದಿಗೆ ಮಾತನಾಡಿದ್ದಾರೆ.
🔹 ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಪ್ರಾಮುಖ್ಯತೆ ಏನು?
ಅಯೋಧ್ಯೆಯಲ್ಲಿ ಭಗವದ್ಭಕ್ತರ, ಭಾವುಕರ ಕನಸು ನನಸಾಗುತ್ತಿದೆ. ಅದು ಕೇವಲ ನಮ್ಮೊಬ್ಬರ ಅಲ್ಲ, ಜಗತ್ತಿನ ಎಲ್ಲರ ಭಾವನೆಗಳು ತಣಿಯುತ್ತಿದೆ, ಅಷ್ಟು ನಾವು ಸಂತುಷ್ಟರಾಗಿದ್ದೇವೆ. ಜಗತ್ತಿನ ಆದರ್ಶ ಪುರುಷ ಶ್ರೀರಾಮನಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ಅವಶ್ಯವಾಗಿ ಆಗಬೇಕಾದ ಕಾರ್ಯ. ಇದು ಶತಮಾನಗಳ ಕನಸು, ನಾವು ಅದನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದೇವೆ. ಆದರೆ ರಾಮ ಮಂದಿರ ಕಟ್ಟುವುದೆಂದರೆ ಕೇವಲ ನಾಲ್ಕು ಗೋಡೆಗಳ ಕಟ್ಟಡವಲ್ಲ, ಅದು ನಮ್ಮ ವ್ಯಕ್ತಿತ್ವದ ಪುನರುತ್ಥಾನ. ಹಿಂದೆ ಮನೆಗಳಲ್ಲಿ ಅನೂಚಾನವಾಗಿ ನಡೆದುಕೊಂಡು ಬಂದ ಭಜನೆ, ನಾಮ ಸಂಕೀರ್ತನೆ ಸಹಿತ ಉತ್ತಮ ಸಂಸ್ಕಾರವನ್ನು ಮತ್ತೆ ಪುನರುತ್ಥಾನಗೊಳಿಸಬೇಕು.
🔹 ಅಯೋಧ್ಯೆಗೂ ಉಡುಪಿಗೆ ಬಹಳ ನಂಟಿದೆ, ಪೇಜಾವರ ಶ್ರೀವಿಶ್ವೇಶತೀರ್ಥರ ಹೋರಾಟವನ್ನು ನೆನಪಿಸುವುದಾದರೆ…?
ಗುರುಗಳು ಅಯೋಧ್ಯೆ ರಾಮಮಂದಿರಕ್ಕಾಗಿ ತಮ್ಮ ಹೋರಾಟವನ್ನು ಮಾಡುತ್ತಿದ್ದರು. ‘ಶ್ರೀರಾಮಚಂದ್ರನ ಜನ್ಮಭೂಮಿ ಮುಕ್ತಿಗಾಗಿ ಕೃಷ್ಣಜನ್ಮಸ್ಥಾನಕ್ಕೂ ತಾನು ಹೋಗಲು ಸಿದ್ಧ’ ಎಂದು ಹೇಳಿದ್ದಷ್ಟೇ ಅಲ್ಲ, ಪ್ರಥಮ ಕರಸೇವೆಯ ಸಂದರ್ಭದಲ್ಲಿ ಗುರುಗಳನ್ನು ಗೃಹ ಬಂಧನ ಮಾಡಲಾಗಿತ್ತು. ವಾಹನಗಳನ್ನು ತಡೆದು ನಿಲ್ಲಿಸಿದರೆ, ಕಾಲ್ನಡಿಗೆಯಲ್ಲಿ ಮುಂದೆ ಹೋಗಿ ಆ ಕ್ಷೇತ್ರವನ್ನು ತಲುಪಿದವರು. ಉಡುಪಿ ಶ್ರೀಕೃಷ್ಣಮಠದಲ್ಲಿ ಪೇಜಾವರ ಮಠದ ಎರಡು ಪರ್ಯಾಯದಲ್ಲಿ ಧರ್ಮ ಸಂಸತ್ ನಡೆಸಿ, ಪ್ರಮುಖ ನಿರ್ಣಯಗಳನ್ನು ತೆಗೆದುಕೊಳ್ಳಲಾಗಿತ್ತು. ಮಂದಿರಕ್ಕೆ ಹಾಕಿದ ಬೀಗಮುದ್ರೆಯನ್ನು ತೆರವುಗೊಳಿಸಲೇ ಬೇಕು ಎನ್ನುವ ನಿಟ್ಟಿನಲ್ಲಿ ’ತಾಲಾ ಖೋಲ್ನ’ ಆಂದೋಲನದ ತೀರ್ಮಾನ ತೆಗೆದುಕೊಂಡದ್ದು ಉಡುಪಿಯ ಶ್ರೀಕೃಷ್ಣನ ಸನ್ನಿಧಾನದಲ್ಲಿ, ನಮ್ಮ ಗುರುಗಳ ನೇತೃತ್ವದಲ್ಲಿ. 2017ರ ಪರ್ಯಾಯದಲ್ಲಿ ನಡೆದ ಧರ್ಮ ಸಂಸತ್‌ನಲ್ಲಿಯೂ ಮಂದಿರದ ನಿರ್ಮಾಣಕ್ಕಾಗಿ ಜನ್ಮಭೂಮಿಯನ್ನು ಹಿಂದುಗಳಿಗೆ ಹಸ್ತಾಂತರಿಸಲೇಬೇಕೆನ್ನುವ ಮತ್ತೊಂದು ಹಕ್ಕೊತ್ತಾಯಕ್ಕೆ ಕೃಷ್ಣ ಮತ್ತು ರಾಮನ ಅನುಗ್ರಹವಿತ್ತು. ಅದೀಗ ನಮ್ಮ ಸಮಾಜಕ್ಕೆ ದೊರೆತಿದೆ. ಭವ್ಯ ಕನಸು ನನಸಾಗುತ್ತಿದೆ.
ದೇಶದ ಪ್ರಧಾನಿಗಳು ಅಲ್ಲಿ ಭೂಮಿ ಪೂಜನೆಯನ್ನು ನಡೆಸಿ, ಮಂದಿರದ ನಿರ್ಮಾಣಕ್ಕೆ ಚಾಲನೆ ನೀಡುತ್ತಿದ್ದಾರೆ.
🔹 ಗುರುಗಳಾದ ಪೇಜಾವರ ಶ್ರೀಗಳ ರಾಮಮಂದಿರದ ಕನಸು ನನಸಾಗುವ ಮೊದಲೇ ಹೊರಟರು, ಇದ್ದಿದ್ದರೆ ಅವರ ಸಂಭ್ರಮ ಹೇಗಿರುತ್ತಿತ್ತು?
ಅಯೋಧ್ಯೆ ರಾಮಮಂದಿರದ ತೀರ್ಪು ಬಂದಾಗಲೇ ತಮ್ಮ ಜನ್ಮ ಸಾರ್ಥಕವಾಯಿತು, ಇಂತಹದ್ದೊಂದು ಕಾರ್ಯವನ್ನು ನಡೆಸಿಕೊಡುವುದಕ್ಕಾಗಿಯೇ ತಾವು ಅವತರಿಸಿದ್ದೇವೋ ಎನ್ನುವ ರೀತಿಯಲ್ಲಿ ಗುರುಗಳು ಧನ್ಯತಾಭಾವ ತಳೆದಿದ್ದರು. ಬಹುಶಃ ಆ ಧನ್ಯತಾಭಾವವನ್ನು ಅವರಿಗೆ ಒಳಗೆ ತುಂಬಿಸಿಕೊಳ್ಳಲು ಸಾಧ್ಯವಾಗದೇ ಇದ್ದಿತೋ ಏನೋ. ನಮ್ಮನ್ನು ಬಿಟ್ಟು ಹೊರಟುಬಿಟ್ಟರು. ಅಷ್ಟರಲ್ಲೇ ಅವರು ಭಾವುಕರಾಗಿದ್ದು, ಖುಷಿಪಟ್ಟಿದ್ದರು. ಚಾತುರ್ಮಾಸ್ಯ ವ್ರತದ ನಿಮಿತ್ತವಾಗಿ ಸ್ಥಳವನ್ನು ಬಿಟ್ಟು ಹೋಗುವಂತೆ ಇರುತ್ತಿರಲಿಲ್ಲ, ಹಾಗಾಗಿ ಗುರುಗಳು ದಿನಾಂಕವನ್ನು ಮುಂದೂಡಲು ಸಾಧ್ಯವಿದೆಯೇ ಎಂಬುದನ್ನು ನೋಡಿ, ಎಂದು ದಿನಾಂಕವನ್ನೇ ಬದಲಿಸುವ ಪ್ರಯತ್ನ ಮಾಡುತ್ತಿದ್ದರೋ ಏನೋ. ಅದೂ ಸಾಧ್ಯವಾಗದೇ ಇದ್ದಿದ್ದರೆ ತಾವು ಉಳಿದುಕೊಂಡಲ್ಲೇ ಉಳಿದುಕೊಂಡು, ರಾಮ ದೇವರ ಪೂಜೆಯಲ್ಲಿ ಭಾಗಿಗಳಾಗಿ ಅನುಭೂತಿಯನ್ನು ಅನುಭವಿಸುತ್ತಿದ್ದರು.
🔹 ರಾಮ ಮಂದಿರ ನಿರ್ಮಾಣದಲ್ಲಿ ಭಕ್ತರ ಪಾಲ್ಗೊಳ್ಳುವಿಕೆ ಹೇಗಿರಬೇಕು? ಆರ್ಥಿಕ ಕ್ರೋಢೀಕರಣ ಹೇಗೆ ನಡೆಯುತ್ತದೆ?
ಪ್ರಪಂಚದಲ್ಲಿರುವ ಸದ್ಭಕ್ತರು ಎಲ್ಲರೂ ಕೈಜೋಡಿಸಿದ್ದದ್ದಾದರೆ ಯಾವ ಕಾರ್ಯವೂ ಕಷ್ಟವಲ್ಲ. ಸುಮಾರು 300 ಕೋಟಿ ರೂ. ವೆಚ್ಚದಲ್ಲಿ ರಾಮಮಂದಿರ ಮತ್ತು ಸುಮಾರು 1000 ಕೋಟಿ ರೂ.ಗಳು ಮಂದಿರದ ಪರಿಸರದ ಅಭಿವೃದ್ಧಿಗೆ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಪ್ರತಿಯೊಬ್ಬ ಶ್ರದ್ಧಾಳು ಕನಿಷ್ಠ 10 ರೂ. ಮತ್ತು ಒಂದು ಮನೆಯಿಂದ ಕನಿಷ್ಠ 101 ರೂ. ನೀಡಬೇಕು. ಹೀಗೊಂದು ಸಂಕಲ್ಪ ಮಾಡಿದ್ದೇವೆ. ದೊಡ್ಡ ಕಂಪನಿ, ಸಂಸ್ಥೆಗಳಿವೆ. ಅವುಗಳ ಸಹಕಾರವನ್ನೂ ಪಡೆದುಕೊಂಡು ದೇವಾಲಯದ ನಿರ್ಮಾಣ ಕಾರ್ಯ ನಡೆಸಲಾಗುತ್ತದೆ. ಮಂದಿರ ಒಬ್ಬರ ಸ್ವತ್ತು ಆಗಬಾರದು, ಎಲ್ಲರೂ ತಮ್ಮ ಶಕ್ತಿ ಸಾಮರ್ಥ್ಯಕ್ಕೆ ಅನುಗುಣವಾಗಿ ಆ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತಾರೆ.
🔹 ರಾಮ ಮಂದಿರಕ್ಕೆ ಭೂಮಿ ಪೂಜನ ಕಾರ್ಯ ನಡೆಯುತ್ತಿದೆ, ಆದರೂ ಈಗ ಕೂಡ ಅಪಸ್ವರ ಕೇಳಿ ಬರುತ್ತಲೇ ಇದೆಯಲ್ಲ?
ಅಯೊಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣ ಶತಶತಮಾನಗಳ ಹೋರಾಟದ ಫಲ. ಒಬ್ಬರು ಇಬ್ಬರು ಅಲ್ಲ, ವಿಶ್ವದ ಅನೇಕ ಮಂದಿ ಶ್ರದ್ಧಾಳುಗಳು ಇದರಲ್ಲಿ ಕೈಜೋಡಿಸಿದ್ದಾರೆ. ಅವರ ಶ್ರದ್ಧೆಗೆ ಬೆಲೆ ಕೊಡಬೇಕಾದ್ದು ಎಲ್ಲರ ಕರ್ತವ್ಯ. ಅದಕ್ಕೂ ಮಿಗಿಲಾಗಿ ನಮ್ಮ ಸರ್ವೋಚ್ಚ ನ್ಯಾಯಾಲಯ ಏನು ತೀರ್ಪು ಕೊಟ್ಟಿದೆ. ಅದನ್ನು ವಿರೋಧಿಸುವಂತಹದ್ದು ನಾಗರಿಕ ಪ್ರಜ್ಞೆ ಅಲ್ಲ. ಸರ್ವೋಚ್ಚ ನ್ಯಾಯಾಲಯ ಮಾರ್ಗದರ್ಶನ ಮಾಡಿ, ಇಂಥದ್ದು ಮಾಡಿ ಎಂದಿರುವುದಕ್ಕೆ ಎಲ್ಲರೂ ಕೈಜೋಡಿಸಬೇಕು.
🔹 ಅಯೋಧ್ಯೆಯಲ್ಲಿ ರಾಮ ಜನ್ಮಭೂಮಿಯಲ್ಲಿ ಏನೇನೆಲ್ಲ ಇರುತ್ತದೆ?
ಸುಮಾರು 70 ಎಕರೆ ಪ್ರದೇಶದಲ್ಲಿ ಶ್ರೀರಾಮನಿಗೆ ಭವ್ಯವಾದ ಮಂದಿರವನ್ನು ನಿರ್ಮಿಸಲಾಗುತ್ತದೆ. ಅದೇ ರೀತಿ ಶ್ರೀರಾಮನ ದರ್ಶನಕ್ಕಾಗಿ ಬರುವ ರಾಮಭಕ್ತರಿಗೆ ಅವಶ್ಯವಿರುವ ಅನುಕೂಲತೆಗಳನ್ನು ಮಾಡಿಕೊಡಲಾಗುತ್ತದೆ. ಜೊತೆಗೆ ಮರ್ಯಾದಾ ಪುರುಷೋತ್ತಮ ಶ್ರೀರಾಮನ ಚರಿತ್ರೆಯನ್ನು ತಿಳಿಸುವ ಭವನಗಳು ಕೂಡ ಅಲ್ಲಿರುತ್ತವೆ.
🔹 ಒಬ್ಬ ರಾಮ ಉಪಾಸಕರಾಗಿ ಜೊತೆಗೆ ಟ್ರಸ್ಟ್‌ನ ವಿಶ್ವಸ್ಥರೂ ಆಗಿ ಭೂಮಿ ಪೂಜನದಲ್ಲಿ ಭಾಗಿಯಾಗದಿರುವುದಕ್ಕೆ ಖೇದವಿದೆಯೇ?
ಶ್ರೀರಾಮ ಮಂದಿರದ ಭೂಮಿ ಪೂಜನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕಾಗಿದ್ದು ನಮ್ಮ ಕರ್ತವ್ಯವೇ ಆಗಿತ್ತು. ಆದರೆ ಧಾರ್ಮಿಕ ನಿಯಮದಿಂದಾಗಿ ನಾವು ಪಾಲ್ಗೊಳ್ಳುವುದು ಸಾಧ್ಯವಾಗುತ್ತಿಲ್ಲ. ನಮ್ಮ ದೇವರು ಸರ್ವಾಂತರ್ಯಾಮಿ, ಹಾಗಾಗಿ ನಾವು ಇಲ್ಲಿ ಮಾಡಿದ ಪ್ರಾರ್ಥನೆ ಕೂಡ ಅವನಿಗೆ ತಲುಪುತ್ತದೆ. ಹಾಗಾಗಿ ಭೌತಿಕವಾಗಿ ಮಾತ್ರ ನಾವು ಅಲ್ಲಿಲ್ಲ ಎಂದೆನಿಸಿದರೂ ಭಾವನಾತ್ಮಕವಾಗಿ ನಾವು ಅಲ್ಲಿಯೇ ಇರುತ್ತೇವೆ.

Latest Posts

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...

ಕಾಸರಗೋಡು ಜಿಲ್ಲೆಯಲ್ಲಿ ಅನ್ ಲಾಕ್-4 ಜಾರಿಗೆ: ಸಹಜ ಸ್ಥಿತಿಯತ್ತ ಜನಜೀವನ

ಕಾಸರಗೋಡು: ಜಿಲ್ಲೆಯಲ್ಲಿ ಕೊರೋನಾ ಹರಡುವಿಕೆಯ ಆತಂಕ ನೆಲೆಗೊಂಡಿರುವಂತೆಯೇ ಇನ್ನಷ್ಟು ಸಡಿಲಿಕೆ ಜಾರಿಗೆ ಬರುವುದರೊಂದಿಗೆ ಜನಜೀವನ ಸಹಜ ಸ್ಥಿತಿಗೆ ಮರಳತೊಡಗಿದೆ. ದೇಶದಲ್ಲಿ ಅನ್ ಲಾಕ್-4 ಸಡಿಲಿಕೆ ಸೋಮವಾರದಿಂದ ಜಾರಿಗೆ ಬಂದಿದೆ. ಅದರಂತೆ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ 100...

Don't Miss

 ಔರಾದ್-ಬೀದರ ರಸ್ತೆ ದುರಸ್ತಿಗೆ 1.10 ಕೋಟಿ ರೂ. ಪ್ರಸ್ತಾವನೆ: ಸಚಿವ ಪ್ರಭು ಚವ್ಹಾಣ್

ಬೀದರ:  ಬೀದರ-ಔರಾದ ರಸ್ತೆ ಸರಿಪಡಿಸಲು 1.10 ಕೋಟಿ ರೂ.ಗಳು ಹಾಗೂ ಕೌಠಾ ಸೇತುವೆ ದುರಸ್ತಿಗೆ 2 ಕೋಟಿ ರೂ.ಗಳ ಪ್ರಸ್ತಾವನೆಯನ್ನು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಸಲ್ಲಿಸಲಾಗಿದೆ ಎಂದು ಪಶು ಸಂಗೋಪನೆ, ವಕ್ಫ್,...

ಕೃಷಿ ವಿಧೇಯಕದಿಂದ ದೇಶದ ರೈತರ ಬಲ ಮತ್ತಷ್ಟು ಹೆಚ್ಚಳ: ಬಿಹಾರ ಸಿಎಂ ನಿತೀಶ್ ಕುಮಾರ್

ಪಾಟ್ನಾ: ಕೇಂದ್ರ ಸರ್ಕಾರದ ಜಾರಿಗೊಳಿಸಿದ ಕೃಷಿ ವಿಧೇಯಕ ದೇಶದ ಕೃಷಿ ವಲಯದ ಚಹರೆಯನ್ನು ಬದಲಿಸಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ಕೃಷಿ ವಿಧೇಯಕಕ್ಕೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಇಂದು ಬಿಹಾರದಲ್ಲಿ...

ಕಳೆದ ನಾಲ್ಕು ವರ್ಷಗಳಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ, 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ!

ಹೊಸದಿಲ್ಲಿ: ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ 2,120 ಪಾಕಿಸ್ತಾನಿ, 188 ಅಫ್ಘಾನಿಸ್ತಾನಿ ಮತ್ತು 99 ಬಾಂಗ್ಲಾದೇಶಿ ಪ್ರಜೆಗಳಿಗೆ ಭಾರತದ ಪೌರತ್ವ ನೀಡಲಾಗಿದೆ ಎಂದು ಕೇಂದ್ರ ಸರಕಾರ ಸೋಮವಾರ ರಾಜ್ಯಸಭೆಗೆ ಮಾಹಿತಿ ನೀಡಿದೆ. 2017ರಿಂದ ಈ...
error: Content is protected !!