Saturday, August 13, 2022

Latest Posts

ಅಯೋಧ್ಯೆ: ಹಿಂದುಗಳಿಗೆ ಶುಭ ಕೋರಿದ ಕ್ರಿಕೆಟಿಗ ಶಮಿ ಮಾಜಿ ಪತ್ನಿಗೆ ಬೆದರಿಕೆ! 

ಕೋಲ್ಕತಾ: ಅಯೋಧ್ಯಾ ಶ್ರೀರಾಮಮಂದಿರ ಭೂಮಿಪೂಜೆ ಅಂಗವಾಗಿ ಭಾರತೀಯರಿಗೆ ಶುಭಾಶಯ ಕೋರಿದ್ದ ಖ್ಯಾತ ಭಾರತೀಯ ಕ್ರಿಕೆಟಿಗ ಮೊಹಮ್ಮದ್ ಶಮಿ ಅವರ ಮಾಜಿ ಪತ್ನಿ ಹಸಿನ್ ಜಹಾನ್ ಅವರಿಗೆ ಇದೀಗ ದುಷ್ಕರ್ಮಿಗಳಿಂದ ಜೀವ ಬೆದರಿಕೆ ಕರೆಗಳು ಬಂದಿದ್ದು, ಈ ಹಿನ್ನೆಲೆಯಲ್ಲಿ ಹಸಿನ್ ಅವರು ಪೊಲೀಸರಿಗೆ ದೂರು ನೀಡಿ ರಕ್ಷಣೆ ಕೋರಿದ ಘಟನೆ ನಡೆದಿದೆ.
ಆ.೫ರಂದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಡೆದ ಭೂಮಿ ಪೂಜೆ ಹಿನ್ನೆಲೆಯಲ್ಲಿ ಹಿಂದು ಸಹೋದರ ಹಾಗೂ ಸಹೋದರಿಯರಿಗೆ ಶುಭಾಶಯ ಕೋರಿದ್ದೆ. ಇಷ್ಟಕ್ಕೇ ಕೆಲ ತುಚ್ಚ ಮನಸ್ಸಿನ ವ್ಯಕ್ತಿಗಳು ನನಗೆ ಕಿರುಕುಳ ನೀಡಲಾರಂಭಿಸಿದ್ದು, ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಿದ್ದಾರೆ. ಕೆಲವರು ನನಗೆ ಜೀವ ಬೆದರಿಕೆ ಒಡ್ಡಿದರೆ, ಕೆಲವರು ಅತ್ಯಾಚಾರ, ಲೈಂಗಿಕ ದೌರ್ಜನ್ಯ ಎಸಗುವುದಾಗಿ ಬೆದರಿಸುತ್ತಿದ್ದಾರೆ. ಇದು ನನ್ನಲ್ಲಿ ಆಘಾತವನ್ನುಂಟು ಮಾಡಿದ್ದು ,ಅಸುರಕ್ಷಿತ ಭಾವನೆಗಳು ಮೂಡಲಾರಂಭಿಸಿದೆ. ದಯವಿಟ್ಟು ಸಹಾಯ ಮಾಡಿ. ಇದೇ ರೀತಿ ಮುಂದುವರೆದರೆ, ನಾನು ಮಾನಸಿಕ ಸಮಸ್ಯೆಗೊಳಗಾಗಬಹುದು ಎಂದು ಹಸಿನ್ ಅವರು ದೂರಿನಲ್ಲಿ ತಿಳಿಸಿದ್ದಾರೆ.
ನಾನೀಗ ನನ್ನ ಮಗಳೊಂದಿಗೆ ಒಬ್ಬಂಟಿಯಾಗಿ ಜೀವನ ನಡೆಸುತ್ತಿದ್ದು, ಇಂತಹ ಬೆದರಿಕೆಗಳಿಂದಾಗಿ ಅಭದ್ರತೆಯ ಭಾವನೆ ಮೂಡಿದೆ. ಪ್ರತಿ ರಾತ್ರಿ ಭಯದಿಂದಲೇ ಕಳೆಯುವಂತಾಗಿದೆ. ಈ ಮಾನಸಿಕ ಹಿಂಸೆಯನ್ನು ದೂರಾಗಿಸಿ ನನ್ನನ್ನು ಭಯಮುಕ್ತಳನ್ನಾಗಿಸಬೇಕು.ಮಾನವೀಯತೆ ಆಧಾರದ ಮೇಲೆ ದಯೆ ತೋರಿಸುತ್ತೀರೆಂಬ ಭರವಸೆ ನನಗಿದೆ ಎಂಬುದಾಗಿ ಹಸಿನ್ ಭಯದಿಂದ ಪೊಲೀಸರಿಗೆ ರಕ್ಷಣೆಗಾಗಿ ಮೊರೆಯಿಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss