ಹೊಸದಿಗಂತ ಆನ್ ಲೈನ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ, ಸೋಮೇಶ್ವರ, ಉಚ್ಚಿಲ ಸಮುದ್ರ ತೀರದಲ್ಲಿ ನೀಲಿ ತೆರೆಗಳು ದಡಕ್ಕೆ ಅಪ್ಪಳಿಸಲು ಆರಂಭಿಸಿವೆ. ಅರಬ್ಬಿ ಸಮುದ್ರದ ಮಲ್ಪೆ, ಕಾರವಾರ ಉದ್ದಕ್ಕೂ ನೀಲಿ ಬೆಳಕು ಕಾಣಿಸಿಕೊಳ್ಳುತ್ತಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಸುದ್ಧಿ ಹರಡುತ್ತಿದ್ದಂತೆ, ಸೋಮೇಶ್ವರ ಸಮುದ್ರ ತೀರದಲ್ಲಿ ಜನ ಜಮಾಯಿಸಿ ನೀಲಿ ಬೆಳಕು ದಡಕ್ಕೆ ಅಪ್ಪಳಿಸುವುದನ್ನು ಕಂಡು ಬೆರಗಾದರು.
ಉಳ್ಳಾಲ, ಮುಕ್ಕಚ್ಚೇರಿ, ಸೋಮೆಶ್ವರ, ಉಚ್ಚಿಲ, ತಲಪಾಡಿ ಭಾಗಗಳಲ್ಲಿ ಸಮುದ್ರದ ಅಲೆಗಳಲ್ಲಿ ನೀಲಿ ಬೆಳಕು ಕಾಣಿಸಿಕೊಂಡಿದೆ. ಹಲವು ದಿನಗಳಿಂದ ಬೆಳಕು ಕಾಣುತ್ತಿದ್ದರೂ, ಕಾರವಾರ ಮಲ್ಪೆ ಸಮುದ್ರ ತೀರದ ಬೆಳಕಿನ ಸುದ್ಧಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದಂತೆ ಉಳ್ಳಾಲ ಭಾಗದಲ್ಲಿಯೂ ಕುತೂಹಲಿಗರು ಸಮುದ್ರ ತೀರದಲ್ಲಿ ತಡರಾತ್ರಿವರೆಗೂ ಉಳಿದು ಅಲೆಗಳ ಜತೆಗೆ ನೀಲಿಬೆಳಕಿನ ಆಟವನ್ನು ಮೊಬೈಲ್ ಹಾಗೂ ಕ್ಯಾಮೆರಗಳ ಮೂಲಕ ಸೆರೆಹಿಡಿದರು.
ವೈಜ್ಞಾನಿಕ ಕಾರಣ ಹಲವು ಇದ್ದರೂ, ಈ ಕುರಿತು ತಲೆಕಡೆಸಿಕೊಳ್ಳದ ಜನತೆ ಸಮುದ್ರದ ವಿಹಂಗಮ ನೋಟವನ್ನು ಕಂಡು ಬೆರಗಾದರು.