Tuesday, July 5, 2022

Latest Posts

ಅಯ್ಯೋ ಹೀಗೂ ಉಂಟೇ… ಫ್ಲ್ಯಾಟ್‌ನಲ್ಲಿದ್ದ ವಿದ್ಯಾರ್ಥಿ ಗೆಳೆಯನನ್ನು ಸೂಟ್‌ಕೇಸ್‌ನಲ್ಲಿ ಕರೆತಂದ!

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್‌ಡೌನ್ ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿದೆ. ರಸ್ತೆಗೆ ಇಳಿಯದಂತೆ ಪ್ರತಿಯೊಬ್ಬರ ಮೇಲೂ ಪೊಲೀಸ್ ಇಲಾಖೆ ಕಣ್ಣಿಟ್ಟಿದೆ. ಪ್ರತಿಯೊಂದು ಗ್ರಾಮದವರು ಕೂಡ ತಮ್ಮೂರಿಗೆ ಯಾರೂ ಬಾರದಂತೆ ಎಚ್ಚರವಹಿಸುತ್ತಿದ್ದಾರೆ. ನಗರದ ಫ್ಲ್ಯಾಟ್‌ಗಳಲ್ಲೂ ಈ ನಿಯಮ ಪಾಲನೆಯಾಗುತ್ತಿದೆ. ಈ ನಡುವೆ ಫ್ಲ್ಯಾಟ್‌ನಲ್ಲಿ ಒಬ್ಬನೇ ಇರಲು ಬೋರ್ ಆಗುತ್ತೆ ಎಂದು ವಿದ್ಯಾರ್ಥಿಯೊಬ್ಬ ಸೂಟ್‌ಕೇಸ್‌ನಲ್ಲಿ ಗೆಳೆಯನನ್ನು ಕರೆತಂದು ಪೇಚಿಗೆ ಸಿಲುಕಿದ ಘಟನೆ ಭಾನುವಾರ ನಡೆದಿದೆ.
ಒಬ್ಬನೇ ಇರಲು ಬೋರ್ ಆಗುತ್ತೆ ಎಂದು…
ಲಾಕ್‌ಡೌನ್ ಹಿನ್ನೆಲೆಯಲ್ಲಿ ಇಲ್ಲಿನ ಆರ್ಯ ಸಮಾಜ ರಸ್ತೆಯಲ್ಲಿರುವ ಫ್ಲ್ಯಾಟ್ ಒಂದರಲ್ಲಿ ಕಟ್ಟು ನಿಟ್ಟಿನ ನಿಯಮವಿತ್ತು. ಫ್ಲ್ಯಾಟ್‌ನವರನ್ನು ಹೊರತುಪಡಿಸಿ ಬೇರೆ ಯಾರೂ ಫ್ಲ್ಯಾಟ್‌ಗೆ ಬರುವಂತಿರಲಿಲ್ಲ. ಆದರೆ ಫ್ಲ್ಯಾಟ್‌ನಲ್ಲಿ ರೂಂನಲ್ಲಿ ಬಾಡಿಗೆಗೆ ಇದ್ದ ವಿದ್ಯಾರ್ಥಿಯೊಬ್ಬ ತನಗೆ ಒಬ್ಬನೇ ಇರಲು ಬೋರ್ ಆಗುತ್ತೆ ಎಂದು ಗೆಳೆಯನನ್ನು ಕರೆತರುವ ಪ್ಲ್ಯಾನ್ ಮಾಡಿದ್ದಾನೆ. ಇದಕ್ಕಾಗಿ ದೊಡ್ಡದಾದ ಸೂಟ್‌ಕೇಸ್ ತಂದಿದ್ದು, ಅದರೊಳಗೆ ಗೆಳೆಯನನ್ನು ತುಂಬಿಸಿ ಕರೆತಂದಿದ್ದಾನೆ.
ಸೂಟ್‌ಕೇಸ್ ಒಳಗೆ ವ್ಯಕ್ತಿ !!
ಅಪಾರ್ಟ್‌ಮೆಂಟ್ ಒಳಗೆ ಕೊಂಡೊಯ್ಯುತ್ತಿದ್ದಂತೆ ಸೂಟ್‌ಕೇಸ್ ಅಲುಗಾಡಿದ್ದು, ಫ್ಲ್ಯಾಟ್‌ನವರು ಅನುಮಾನ ಬಂದು ತಪಾಸಣೆ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸೂಟ್‌ಕೇಸ್ ಒಳಗೆ ವ್ಯಕ್ತಿ ಇರುವುದು ಬೆಳಕಿಗೆ ಬಂದಿದೆ. ಘಟನೆಯ ಕುರಿತಂತೆ ಇಬ್ಬರನ್ನು ಕದ್ರಿ ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಣೆಗೊಳಪಡಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss