Tuesday, July 5, 2022

Latest Posts

ಅರಣ್ಯ ಇಲಾಖೆಯಿಂದ ಸಿಗುವ ಸೌಲಭ್ಯ ದೊರಕಿಸಲು ಕ್ರಮ: ಅರಣ್ಯಾಧಿಕಾರಿ ಸದಾಶಿವ ಎಸ್. ಹೆಗ್ಗಡೆ

ರಾಮನಗರ: ಕಾಡು ಪ್ರಾಣಿಗಳ ದಾಳಿಯಿಂದ ನೊಂದ ರೈತಾಪಿ ವರ್ಗಕ್ಕೆ ಅರಣ್ಯ ಇಲಾಖೆಯಿಂದ ಸಿಗುವ ಸವಲತ್ತುಗಳ ದೊರಕಿಸಿ ಕೊಡಲಾಗುವುದು ಎಂದು ಜಿಲ್ಲಾ ಅರಣ್ಯಾಧಿಕಾರಿ ಸದಾಶಿವ ಎಸ್. ಹೆಗ್ಗಡೆ ತಿಳಿಸಿದರು. ಅವರು ತಾಲ್ಲೂಕಿನ ಅರಳಾಳು ಸಂದ್ರದಲ್ಲಿ ಆಯೋಜಿಸಲಾಗಿದ್ದ ರೈತ ಸಭೆಯಲ್ಲಿ ಮಾತನಾಡಿ, ಈ ಭಾಗದಲ್ಲಿ ಆಗಾಗ್ಗೆ ದಾಳಿ ಮಾಡುತ್ತಿರುವ ಆನೆಗಳು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡುವುದರ ಜೊತೆಗೆ ಮನುಷ್ಯರ ಮೇಲೆ ದಾಳಿ ಮಾಡುತ್ತಿರುವುದಕ್ಕೆ ವಿಷಾಧ ವ್ಯಕ್ತಪಡಿಸಿದರು. ಕಾಡು ಪ್ರಾಣಿಗಳ ದಾಳಿಯಿಂದ ನಾಶವಾದ ಬೆಳೆಗಳಿಗೆ ಬೆಳೆ ಪರಿಹಾರ ನೀಡಲು ಅರಣ್ಯ ಇಲಾಖೆ ನೀತಿ ನಿಯಾಮಾನುಸಾರದ ಪರಿಹಾರ ನೀಡಲಾಗುತ್ತಿದೆ. ಅಲ್ಲದೆ ಕಾಡು ಪ್ರಾಣಿಗಳ ದಾಳಿಗೆ ಒಳಗಾದವರಿಗೆ ಹಾಗೂ ಪ್ರಾಣ ಹಾನಿಯಾದವರಿಗೆ ಸೂಕ್ತ ಪರಿಹಾರ ನೀಡಲಾಗುವುದೆಂದರು. ಇದೇ ಸಂದರ್ಭದಲ್ಲಿ ರೈತ ನಾಯಕರಾದ ಸಿ.ಪುಟ್ಟಸ್ವಾಮಿ ಮಾತನಾಡಿ, ಕಾಡುಪ್ರಾಣಿಗಳ ದಾಳಿಯಿಂದ ನಾಶವಾದ ಬೆಳೆಗಳಿಗೆ ಅರಣ್ಯ ಇಲಾಖೆ ನೀಡುತ್ತಿರುವ ಪರಿಹಾರ ಬಹಳ ಕಡಿಮೆ ಮೊತ್ತವಾಗಿದ್ದು, ರೈತರು ಕಷ್ಟಪಟ್ಟು ಬೆಳೆದ ಬೆಳೆಗಳಿಗೆ ಸೂಕ್ತವಾದ ಪರಿಹಾರ ನೀಡಬೇಕೆಂದರು. ಅರಳಾಳುಸಂದ್ರ ಹಾಗೂ ಇಲ್ಲಿನ ಹಲವಾರು ಭಾಗಗಳಲ್ಲಿ ಆನೆಗಳು ನಿರಂತರ ದಾಳಿ ಮಾಡುತ್ತಿವೆ. ಆನೆಗಳ ನಿಯಂತ್ರಣ ಮಾಡುವ ನಿಟ್ಟಿನಲ್ಲಿ ಅರಣ್ಯ ಇಲಾಖೆ ಮುಂದಾಗಬೇಕು ಎಂಧು ಮನವಿ ಮಾಡಿದರು. ರೈತರ ಮನವಿಯನ್ನು ಆಲಿಸಿದ ಅವರು ಆನೆಗಳು ಕಾಡಿನಿಂದ ಬಂದು ರೈತರ ಬೆಳೆಗಳನ್ನು ನಾಶ ಮಾಡದಂತೆ ಸೋಲಾರ್ ಬೇಲಿ ಹಾಗೂ ಟ್ರಂಚರ್‌ಗಳನ್ನು ಮಾಡಿದರು ಅವುಗಳನ್ನು ನಾಶ ಮಾಡುತ್ತಿರುವುದರಿಂದ ರೈಲ್ವೆ ಬ್ಯಾರಿಕೇಡ್‌ಗಳನ್ನು ನಿರ್ಮಾಣ ಮಾಡಲು ಸರ್ಕಾರ ಮುಂದಾಗದೆ ಆಫ್ರೀಕಾದಲ್ಲಿ ರೈಲ್ವೆ ಬ್ಯಾರಿಕೇಡ್‌ಗಳು ಆನೆಗಳ ನಿಯಂತ್ರಣಕ್ಕೆ ಪರಿಣಾಮಕಾರಿಯಾಗಿದೆ ಎಂದರು. ರೈತರ ಪ್ರತಿಯೊಂದ ಅಹವಾಲನ್ನು ಸ್ವೀಕಾರ ಮಾಡಿದ ಅವರು, ಈ ಎಲ್ಲಾ ಅಹವಾಲುಗಳನ್ನು ಸಂಬAಧಿಸಿದ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದೆಂದರು. ಈ ಸಂದರ್ಭ ವಲಯ ಅರಣ್ಯಧಿಕಾರಿ ಮನ್ಸೂರ್ ಅಹಮದ್, ಇಲಾಖೆಯ ಮಧುಕುಮಾರ್, ರೈತ ಮುಖಂಡ ಸುಜೀವನ್‌ಕುಮಾರ್ ಹಾಗೂ ಹಲವಾರು ಮಂದಿ ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss