Friday, July 1, 2022

Latest Posts

ಅರಣ್ಯ ಇಲಾಖೆ ಸಿಬ್ಬಂದಿಗಳ ಯಶಸ್ವಿ ಕಾರ್ಯಾಚರಣೆ: 4 ಆನೆಗಳು ಅರಣ್ಯಕ್ಕೆ

ಕುಶಾಲನಗರ: ಸುಂಟಿಕೊಪ್ಪ ಹೋಬಳಿಯ ಕಾನ್‍ಬೈಲ್ ಬೈಚನಹಳ್ಳಿ, ಅಂದಗೋವೆ, ಕಲ್ಲೂರು ಗ್ರಾಮ ವ್ಯಾಪ್ತಿಯ ಕಾಫಿ ತೋಟಗಳಲ್ಲಿ ಕಾರ್ಯಚರಣೆ ನಡೆಸಿದ ಅರಣ್ಯ ಇಲಾಖೆಯ ಸಿಬ್ಬಂದಿಗಳು 3 ಕಾಡಾನೆಗಳನ್ನು ಸುರಕ್ಷಿತವಾಗಿ ಅತ್ತೂರು ರಕ್ಷಿತಾರಣ್ಯಕ್ಕೆ ಅಟ್ಟಿದ್ದಾರೆ.
ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೆಹರು, ಕುಶಾಲನಗರ ವಲಯ ಅರಣ್ಯಾಧಿಕಾರಿ ಅನನ್ಯ ಕುಮಾರ್ ನೇತೃತ್ವದಲ್ಲಿ ಉಪವಲಯ ಅರಣ್ಯಾಧಿಕಾರಿ ಅನಿಲ್ ಡಿ.ಸೋಜ ಮತ್ತು ಇಲಾಖೆಯ ಸಿಬ್ಬಂದಿಗಳು, ಕ್ಷಿಪ್ರ ಕಾರ್ಯಾಚರಣೆ ತಂಡದ ಸದಸ್ಯರು ಬೆಳಗ್ಗೆ 10 ಗಂಟೆಯಿಂದ ಸಂಜೆ ತನಕ ಅಂದಗೋವೆ ಮತ್ತಿತ್ತರ ಕಡೆ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ 3 ಆನೆಗಳನ್ನು ಅತ್ತೂರು ಅರಣ್ಯ ಕಡೆಗೆ ಅಟ್ಟುವ ಕಾರ್ಯಾಚರಣೆ ನಡೆಸಿದರು.
ಇನ್ನೊಂದು ಕಾರ್ಯಾಚರಣೆ ತಂಡ ಉಪ ವಲಯ ಅರಣ್ಯಾಧಿಕಾರಿಗಳಾದ ಕನ್ನಂಡ ರಂಜನ್, ಮಹದೇವ ನಾಯಕ ನೇತೃತ್ವದಲ್ಲಿ ಮೋದೂರು ವ್ಯಾಪ್ತಿಯ ತೋಟಗಳಿಂದ ಒಂದು ಆನೆಯನ್ನು ಮೀನುಕೊಲ್ಲಿ ಅರಣ್ಯಕ್ಕೆ ಸೇರಿಸಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss