Saturday, August 13, 2022

Latest Posts

ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ: ಭಾನುವಾರ ಮುಸ್ಸಂಜೆ ವೇಳೆ ಉಡುಪಿಯಲ್ಲಿ ವರ್ಷಧಾರೆ ಆರಂಭ

ಉಡುಪಿ: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿರುವುದರಿಂದ ಭಾನುವಾರ ಮುಸ್ಸಂಜೆ ವೇಳೆಯಲ್ಲಿ ಉಡುಪಿಯಲ್ಲಿ ವರ್ಷಧಾರೆ ಆರಂಭವಾಗಿದೆ. ಭಾನುವಾರ ಮುಂಜಾವದಲ್ಲಿ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದು, ದಿನವಿಡೀ ಮೋಡ ಮುಸುಕಿದ ವಾತಾವರಣವಿತ್ತು. ಸಂಜೆಯ ವೇಳೆ ಗಾಳಿಯೊಂದಿಗೆ ವ್ಯಾಪಕವಾಗಿ ಮಳೆ ಸುರಿಯುತ್ತಿದೆ. ಬಲವಾಗಿ ಗಾಳಿ ಬೀಸುತ್ತಿರುವುದರಿಂದ ಮಳೆಯ ತೀವ್ರತೆಯಲ್ಲಿಯೂ ಏರಿಳಿತ ಉಂಟಾಗುತ್ತಿದೆಯಾದರೂ ನಿರಂತರವಾಗಿ ಮುಂದುವರಿದಿದೆ. ಭಾರತೀಯ ಹವಾಮಾನ ಸಚಿವಾಲಯದ ಬೆಂಗಳೂರಿನ ಹವಾಮಾನ ಕೇಂದ್ರವು ಭಾನುವಾರ ಸಂಜೆ ಮುಂದಿನ ಮೂರು ತಾಸುಗಳಲ್ಲಿ ಭಾರೀ ಗಾಳಿ ಮಳೆಯಾಗುವ ಮುನ್ಸೂಚನೆಯನ್ನು ನೀಡಿತ್ತು. ಅದರಂತೆ ಇದೀಗ ವರ್ಷಧಾರೆ ಆರಂಭವಾಗಿದ್ದು, ರಾತ್ರಿ ಪೂರ್ತಿ ಮಳೆಯಾಗುವ ಸಾಧ್ಯತೆ ಇದೆ.
ಉಡುಪಿ ಜಿಲ್ಲೆಯಲ್ಲಿ ಒಂದು ತಾಸಿಗೆ 40-50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಂಭವ ಇದೆಯೆಂದು ಹವಾಮಾನ ಇಲಾಖೆ ತಿಳಿಸಿದೆ. ಈಗಾಗಲೇ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸಲು ತೆರಳಬಾರದು, ಸಾರ್ವಜನಿಕರು ಸಮುದ್ರತೀರದತ್ತ ಹೋಗಬಾರದು ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss