Thursday, August 18, 2022

Latest Posts

ಅರಮನೆಗೆ ಬಂದಿರುವ ದಸರಾ ಗಜಪಡೆಯ ಮಾವುತರು, ಕಾವಾಡಿಗಳಿಗೆ ಕೋವಿಡ್ ಪರೀಕ್ಷೆ

ಮೈಸೂರು: ಈ ಬಾರಿ ಸರಳವಾಗಿ ನಡೆಯುವ ವಿಶ್ವವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲೆಂದು ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಆಗಮಿಸಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆಯ ಮಾವುತರು ಹಾಗೂ ಕಾವಾಡಿಗಳಿಗೆ ಶನಿವಾರ ಕೋವಿಡ್ ಪರೀಕ್ಷೆಯನ್ನು ಮಾಡಲಾಯಿತು.
ನಗರದ ಅಂಬಾವಿಲಾಸ ಅರಮನೆಯ ಆವರಣದಲ್ಲಿ ಜಿಲ್ಲಾ ಅರೋಗ್ಯ ಅಧಿಕಾರಿ ಡಾ ವೆಂಕಟೇಶ್ ನೇತೃತ್ವದ ಆರೋಗ್ಯಾಧಿಕಾರಿಗಳ ತಂಡ, ಸಿಬ್ಬಂದಿ, ಕೋವಿಡ್ ಪರೀಕ್ಷೆ ಮಾಡಲು ಮುಂದಾದಾಗ ಪರೀಕ್ಷೆ ಮಾಡಿಸಿಕೊಳ್ಳಲು ನಿರಾಕರಿಸಿದ ಮಾವುತರು ಹಾಗೂ ಕಾವಾಡಿಗಳು ನಾವು ಕಾಡಿನ ಜನ, ನಮಗೆ ಯಾವ ರೋಗ ಇಲ್ಲ. ಹಾಗಾಗಿ ನಾವು ಯಾವುದೇ ಕಾರಣಕ್ಕೂ ಟೆಸ್ಟ್ ಮಾಡಿಸಲ್ಲ ಎಂದು ಅವರ ಜತೆ ವಾಗ್ವಾದ ಮಾಡಿದರು. ಇದರಿಂದಾಗಿ ಡಿಹೆಚ್‌ಒ ಅವರು ಅರಣ್ಯ ಇಲಾಖೆಯ ಅಧಿಕಾರಿಗಳು ವಿಷಯ ಮುಟ್ಟಿಸಿ, ಮಾವುತರು, ಕಾವಾಡಿಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಿ ಎಂದು ಕೋರಿದರು.
ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಡಿಸಿಎಫ್ ಅವರು, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಬೇಕಾಗಿರುವ ಅನಿವಾರ್ಯತೆಯನ್ನು ಮಾವುತರು, ಕಾವಾಡಿಗಳಿಗೆ ತಿಳಿಸಿ, ಅವರ ಮನವೊಲಿಸುವಲ್ಲಿ ಯಶಸ್ವಿಯಾದರು. ಬಳಿಕ ೫ ಆನೆಗಳ ಮಾವುತ, ಕಾವಾಡಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಕೊರೋನಾ ಟೆಸ್ಟ್ ಮಾಡಲಾಯಿತು. ೧೫ಕ್ಕೂ ಹೆಚ್ಚು ಮಂದಿ ಆಂಟಿಜನ್ ರ‍್ಯಾಪಿಡ್ ಟೆಸ್ಟ್ ಮಾಡಿಸಿಕೊಂಡಿದ್ದು, ಸಂಜೆಯೊಳಗೆ ಮಾವುತ ಕಾವಾಡಿಗಳ ಕೊರೋನಾ ಟೆಸ್ಟ್ ರಿಸಲ್ಟ್ ಬರಲಿದೆ. ಹೀಗಾಗಿ ಕೊರೋನಾ ಪರೀಕ್ಷೆ ವರದಿ ಬರಲಿದೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!