Wednesday, July 6, 2022

Latest Posts

ಅರಮನೆಯಿಂದ ಕಾಡಿನ ಶಿಬಿರಗಳಿಗೆ ತೆರಳಿದ ಗಜಪಡೆ: ಮಗನಿಗೆ ಗಜಪಡೆಯ ದರ್ಶನ ಮಾಡಿಸಿದ ಯದುವೀರ್

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯನ್ನು ಯಶಸ್ವಿಯಾಗಿ ಮುಗಿಸಿದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಬುಧವಾರ ಅರಮನೆ ನಗರಿ ಮೈಸೂರಿನಿಂದ ಕಾಡಿನಲ್ಲಿರುವ ತಮ್ಮ ಶಿಬಿರಗಳಿಗೆ ತೆರಳಿದವು.

ಅಂಬಾವಿಲಾಸ ಅರಮನೆಯ ಆವರಣದಲ್ಲಿ ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲು ಅಕ್ಟೋಬರ್ ೨ ರಂದು ಹುಣಸೂರಿನ ವೀರನಹೊಸಹಳ್ಳಿಯಿಂದ ಮೈಸೂರಿಗೆ ಆಗಮಿಸಿ ಅರಮನೆ ಆವರಣದಲ್ಲಿ ಬೀಡು ಬಿಟ್ಟಿದ್ದ ದಸರಾ ಗಜಪಡೆಯ ಕ್ಯಾಫ್ಟನ್ ಅಭಿಮನ್ಯು, ವಿಕ್ರಮ, ಗೋಪಿ, ವಿಜಯ ಮತ್ತು ಕಾವೇರಿ ಆನೆಗಳಿಗೆ ಸಾಂಪ್ರದಾಯಿಕ ಪೂಜೆಯನ್ನು ಸಲ್ಲಿಸಿ ಬೀಳ್ಕೋಡಲಾಯಿತು. ಆನೆಗಳನ್ನು ಲಾರಿಗೆ ಹತ್ತಿಸಿಕೊಂಡ, ಅದರ ಮಾವುತರು ಮತ್ತು ಕಾವಾಡಿಗಳು ಎಲ್ಲರಿಗೂ ವಂದಿಸಿ, ಮುಂದಿನ ಬಾರಿ ದಸರಾ ವೇಳೆಗೆ ಭೇಟಿಯಾಗೋಣ ಎಂದು ಎಲ್ಲರಿಗೂ ಟಾಟಾ ಮಾಡಿ, ತಮ್ಮ ಕುಟುಂಬದೊAದಿಗೆ ತಮ್ಮ ಶಿಬಿರಗಳಿಗೆ ತೆರಳಿದರು.

ಮಗನಿಗೆ ಆನೆಗಳನ್ನು ತೋರಿಸಿದ ಯದುವೀರ್ : ಅರಮನೆಯಿಂದ ಕಾಡಿನತ್ತ ಹೊರಟಿದ್ದ ಗಜಪಡೆಯಿದ್ದ ಸ್ಥಳಕ್ಕೆ ಆಗಮಿಸಿದ ಮೈಸೂರು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಮ್ಮ ಪುತ್ರ, ಯುವರಾಜ ಆದ್ಯವೀರ್ ಅವರಿಗೆ ಆನೆಯ ದರ್ಶನ ಮಾಡಿಸಿದರು. ಅವರಿಗೆ ಗಜಪಡೆಯ ನಾಯಕನಾಗಿದ್ದ ಅಭಿಮನ್ಯು ಸೊಂಡಿಲನ್ನು ಮೇಲೆತ್ತಿ ನಮಸ್ಕರಿಸಿದ.

ಈ ವೇಳೆ ಡಿಸಿಎಫ್ ಅಲೆಕ್ಸಾಂಡರ್, ಆನೆಗಳ ಮಾವುತರು, ಕಾವಾಡಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss