Monday, August 8, 2022

Latest Posts

ಅರಮನೆ ನಗರಿ ಮೈಸೂರಿಗೆ ಬಿಗ್ ರಿಲೀಫ್: ಮತ್ತಷ್ಟು ಸಡಿಲಗೊಂಡ ನಿರ್ಬಂಧ

ಮೈಸೂರು: ಕಳೆದ 14 ದಿನಗಳಿಂದ ಯಾವುದೇ ಕೊರೋನಾ ವೈರಸ್ ಸೋಂಕಿನ ಪ್ರಕರಣ ಕಾಣಿಸಿಕೊಳ್ಳದ ಹಿನ್ನಲೆಯಲ್ಲಿ ಹೇರಲಾಗಿದ್ದ ನಿರ್ಬಂಧವನ್ನು ಮತ್ತಷ್ಟು ಸಡಿಲಿಕೆ ಮಾಡಲಾಗಿದೆ.

ಇದರಿಂದಾಗಿ ಮೈಸೂರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಅವಶ್ಯಕದೊಂದಿಗೆ ಈಗ ಅವಶ್ಯಕವಲ್ಲದ ಅಂಗಡಿಗಳೂ ಕೂಡ ಗುರುವಾರ ಓಪನ್ ಆಗಿದ್ದು, ವ್ಯಾಪಾರ, ವಹಿವಾಟು ಆರಂಭಿಸಿವೆ. ಇದರಿಂದಾಗಿ ಮೈಸೂರಿನ ಜನ ಜೀವನ ಮತ್ತಷ್ಟು ಸಹಜ ಸ್ಥಿತಿಗೆ ಮರಳಿದೆ. ವ್ಯಾಪರಸ್ಥರ ಜೀವನವನ್ನು ದೃಷ್ಠಿಯಲ್ಲಿಟ್ಟುಕೊಂಡು, ಮೈಸೂರಿನ 91 ವಾಣಿಜ್ಯ ರಸ್ತೆಗಳಲ್ಲಿ ಇದೀಗ ಅವಶ್ಯಕವಲ್ಲದ ಎಲೆಕ್ಟ್ರಾನಿಕ್ಸ್, ಬಟ್ಟೆ, ಮೊಬೈಲ್, ವಾಚ್, ಬ್ಯಾಗ್, ಕ್ರೀಡಾ ಸಾಮಾಗ್ರಿ ಸೇರಿದಂತೆ ಎಲ್ಲಾ ರೀತಿಯ ಅಂಗಡಿಗಳನ್ನು ಓಪನ್ ಮಾಡುವುದಕ್ಕೆ ಜಿಲ್ಲಾಡಳಿತ ಅನುಮತಿಯನ್ನು ನೀಡಿದೆ.

ಇದರಿಂದಾಗಿ ನಗರದ ಪ್ರಮುಖ ವಾಣಿಜ್ಯ ರಸ್ತೆಯಾದ ದೇವರಾಜ ಅರಸು, ಸಯ್ಯಾಜಿರಾವ್ ರಸ್ತೆ, ಕೆ.ಆರ್.ವೃತ್ತ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಅಂಗಡಿಗಳ ಮಾಲೀಕರು, 50 ದಿನಗಳ ಬಳಿಕ ಸಮಾಧಾನದ ನಿಟ್ಟಿಸಿರುನೊಂದಿಗೆ ತಮ್ಮ ಅಂಗಡಿಗಳನ್ನು ತೆರೆದು ವ್ಯಾಪಾರ ಆರಂಭಿಸಿದ್ದಾರೆ.

ರಾತ್ರಿ 7ರ ತನಕ ಮಾತ್ರ ಅವಕಾಶ: ಎಲ್ಲಾ ರೀತಿಯ ಅಂಗಡಿಗಳನ್ನು ಬೆಳಗ್ಗೆ 7 ರಿಂದ ತೆರೆದು, ರಾತ್ರಿ 7ರ ತನಕ ಮಾತ್ರ ವ್ಯಾಪಾರ ನಡೆಸಲು ಅವಕಾಶ ನೀಡಲಾಗಿದೆ. ಅಲ್ಲದೆ ಮಾಸ್ಕ್ ಧರಿಸಿದ ಗ್ರಾಹಕರನ್ನು ಮಾತ್ರ ಅಂಗಡಿಗೆ ಪ್ರವೇಶ ನೀಡಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು ಎಂಬ ಷರತ್ತನ್ನು ನಗರಪಾಲಿಕೆ ಹಾಕಿದೆ.

ಆದರೆ ಕೆಲವು ಅವಶ್ಯಕ ಹಾಗೂ ಅನವಶ್ಯಕ ಅಂಗಡಿಗಳನ್ನು ತೆರೆಯುವುದಕ್ಕೆ ನಿರ್ಬಂಧ ಮುಂದುವರಿಸಿದೆ. ಹೇರ್ ಕಟ್ಟಿಂಗ್ ಅಂಗಡಿ, ಸ್ಪಾ, ಸಲೂನ್, ಚಿತ್ರಮಂದಿರಗಳು, ಮಂದಿರ, ಮಸೀದಿ, ಚರ್ಚ್ಗಳನ್ನು ತೆರೆಯುವುದಕ್ಕೆ ಅವಕಾಶ ನೀಡಿಲ್ಲ, ಅಲ್ಲದೆ ಆಟೋ, ಟ್ಯಾಕ್ಸಿ, ಕ್ಯಾಬ್ಗಳ ಸಂಚಾರಕ್ಕೂ ಕೂಡ ಅವಕಾಶ ನೀಡಿಲ್ಲ.

ಮೈಸೂರು ಅರಮನೆ, ಮೃಗಾಲಯ, ಚಾಮುಂಡಿಬೆಟ್ಟ ಸೇರಿದಂತೆ ಎಲ್ಲಾ ಪ್ರವಾಸಿ ತಾಣಗಳಲ್ಲಿ ನಿರ್ಬಂಧವನ್ನು ಮುಂದುವರಿಸಲಾಗಿದೆ.  ಮೈಸೂರು ಈಗ ರೆಡ್ ಝೋನ್ನಿಂದ ಕಿತ್ತಳೆ ಝೋನ್ನತ್ತ ಹೊರಳಿದೆ. ಸರ್ಕಾರದ ಆದೇಶ ಹೊರಬೀಳುತ್ತಿದ್ದಂತೆ, KSRTC ಬಸ್ ಸಂಚಾರವನ್ನು ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರಂಭಿಸಲು ಚಿಂತಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss