Sunday, June 26, 2022

Latest Posts

ಅರಮನೆ ನಗರಿ ಮೈಸೂರಿನಲ್ಲಿ ಕೊರೋನಾ ಕ್ರೌರ್ಯಕ್ಕೆ ತಂದೆ ಮಗ ಇಬ್ಬರು ಬಲಿ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಮಹಾಮಾರಿ ಕೊರೋನಾ ಕ್ರೌರ್ಯಕ್ಕೆ ಕೃಷಿ ಇಲಾಖೆಯ ಸಹಾಯಕ ಇಂಜಿನಿಯರ್ ಮತ್ತು ಅವರ ಮಗ ಕೊರೋನಾಗೆ ಬಲಿಯಾಗಿದ್ದಾರೆ. ನಾಲ್ಕು ದಿನಗಳ ಅಂತರದಲ್ಲಿ ತಂದೆ ಸಹಾಯಕ ಇಂಜಿನಿಯರ್ ಮತ್ತು ಮಗ ಇಬ್ಬರು ಕೊರೋನಾ ಬಲಿಪಡೆದಿದೆ.

ಜು.೧೫ರಂದು 14 ವರ್ಷದ ಪುತ್ರ ಮೃತಪಟ್ಟರೇ, ಶುಕ್ರವಾರ ರಾತ್ರಿ 47 ವರ್ಷ ವಯಸ್ಸಿನ ಕೃಷಿ ಇಲಾಖೆಯ ಸಹಾಯಕ ಇಂಜಿನಿಯರ್ ಕೊರೋನಾಗೆ ಜೀವ ತೆತ್ತಿದ್ದಾರೆ. ಇಡೀ ಸಹಾಯಕ ಇಂಜಿನಿಯರ್ ಕುಟುಂಬಕ್ಕೆ ಕೊರೋನಾ ವಕ್ಕರಿಸಿತ್ತು. ಕಳೆದ ಶುಕ್ರವಾರ ಕೊರೋನಾ ಪಾಸಿಟಿವ್ ಧೃಢವಾಗಿ ಸಹಾಯಕ ಇಂಜಿನಿಯರ್ ಹಾಗೂ ಅವರ ಪತ್ನಿ, ಮೂವರು ಮಕ್ಕಳು ಚಿಕಿತ್ಸೆಗೆಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು.

ಈ ನಡುವೆ ಸಹಾಯಕ ಇಂಜಿನಿಯರ್ ಪರಿಸ್ಥಿತಿ ಗಂಭೀರವಾದ ಹಿನ್ನಲೆಯಲ್ಲಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಅವರ ಮೂವರು ಮಕ್ಕಳು ಹಾಗೂ ಪತ್ನಿಗೆ ಕೋವಿಡ್ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತಿತ್ತು. ಈ ನಡುವೆ ಮೂರು ದಿನಗಳ ಹಿಂದೆ ೧೪ ವರ್ಷದ ಪುತ್ರ ಸಾವನ್ನಪ್ಪಿದ್ದು, ಇದೀಗ ಮಗನನ್ನೇ ಹಿಂಬಾಲಿಸಿ ತಂದೆಯೂ ಸಹ ಕೊರೋನಾಗೆ ಬಲಿಯಾಗಿದ್ದಾರೆ.

ಇನ್ನು ೧೪ ವರ್ಷದ ಪುತ್ರನ ಅಂತಿಮ ದರ್ಶನ ಪಡೆಯಲಾಗದೆ ಒದ್ದಾಡುತ್ತಿದ್ದ ತಾಯಿ ಹಾಗೂ ಅಕ್ಕಂದಿರು ಇದೀಗ ಅಂತ್ಯಕ್ರಿಯೆಯಲ್ಲೂ ಭಾಗಿಯಾಗಲು ಸಾಧ್ಯವಾಗದೆ ಅಸಾಹಾಯಕರಾಗಿ ಕಣ್ಣೀರು ಹಾಕುತ್ತಿದ್ದಾರೆ. ಇಡೀ ಕುಟುಂಬ ಈಗ ದುಃಖದ ಕಡಲಿನಲ್ಲಿ ಮುಳುಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss