Wednesday, July 6, 2022

Latest Posts

ಅರಮನೆ ನಗರಿ ಮೈಸೂರಿನಲ್ಲಿ ಮತ್ತೆ 17 ಜನರಿಗೆ ಕೊರೋನಾ ಸೋಂಕು ದೃಢ

ಮೈಸೂರು: ಅರಮನೆ ನಗರಿ ಮೈಸೂರಿನಲ್ಲಿ ಒಂದೆಡೆ ಕೊರೋನಾ ಸೋಂಕಿಗೀಡಾಗುತ್ತಿರುವವರ ಸಂಖ್ಯೆ ದಿನೇ ದಿನೇ ದಿನೇ ಹೆಚ್ಚಳವಾಗುತ್ತಿದ್ದರೆ, ಮತ್ತೊಂದೆಡೆ ಸೋಂಕಿನಿoದ ಗುಣವಾಗುತ್ತಿರುವವರ ಸಂಖ್ಯೆ ಏರುತ್ತಿದೆ. ಮತ್ತೊಂದೆಡೆ ಸಾವಿನ ಸಂಖ್ಯೆ ಕೂಡ ನಿಧಾನವಾಗಿ ಹೆಜ್ಜೆ ಹಾಕಲಾರಂಭಿಸಿದೆ.
ಗುರುವಾರ ಮತ್ತೆ ೧೭ ಜನರಿಗೆ ಮಹಾಮಾರಿ ಕೊರೋನಾ ಸೋಂಕಿರುವುದು ಪರೀಕ್ಷಾ ವರದಿಯಿಂದ ದೃಢಪಟ್ಟಿದೆ. ಇವರಲ್ಲಿ ಸೋಂಕಿತರೊoದಿಗೆ ಸಂಪರ್ಕ ಹೊಂದಿದ್ದ ೮ ಜನರಿಗೆ, ಹೊರ ರಾಜ್ಯದ ಪ್ರವಾಸ ಹಿನ್ನಲೆ ಹೊಂದಿರುವ ಮೂವರು, ಹೊರ ಜಿಲ್ಲೆಯ ಪ್ರವಾಸ ಹೊಂದಿರುವ ಒಬ್ಬರು, ಇಬ್ಬರು ಪೊಲೀಸರು, ಒಬ್ಬ ಗರ್ಭಿಣಿ ಮಹಿಳೆ ಹಾಗೂ ಐಎಲ್‌ಐ ಪ್ರಕರಣ ಹೊಂದಿರುವ ಇಬ್ಬರಿಗೆ ಸೋಂಕು ಅಂಟಿದೆ. ಇವರನ್ನೆಲ್ಲಾ ಮೈಸೂರಿನ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದಿನ ಸೋಂಕಿನ ಪ್ರಕರಣದೊಂದಿಗೆ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ೩೩೮ಕ್ಕೆ ಏರಿಕೆಯಾಗಿದೆ.
200 ಮುಟ್ಟಿದ ಗುಣವಾದವರ ಸಂಖ್ಯೆ
ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆದು ಗುಣವಾದವರ ಸಂಖ್ಯೆ ಇಂದಿಗೆ ೨೦೦ಕ್ಕೆ ಬಂದು ಮುಟ್ಟಿದೆ. ಇಂದು ಗುಣವಾದ ೯ ಜನರನ್ನು ಮೈಸೂರಿನ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು. ಇದರಿಂದಾಗಿ ಜಿಲ್ಲೆಯಲ್ಲಿ ಸಕ್ರೀಯ ಸೋಂಕಿತರು ೧೩೪ ಜನರಿದ್ದಾರೆ. ಇಂದು ೬೦ ವರ್ಷದ ವೃದ್ಧೆ ಸೋಂಕಿನಿoದ ಮೃತಪಟ್ಟಿರುವುದರಿಂದ, ಸಾವಿಗೀಡಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss