Sunday, June 26, 2022

Latest Posts

ಅರವತ್ತು ಗಂಟೆಗಳಲ್ಲಿ ನೂರ ಹತ್ತು ಅಡಿ ಉದ್ದದ ಸೇತುವೆ: ದಾಖಲೆ ಬರೆದ ಸೇನೆ!

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೇವಲ ಅರವತ್ತು ಗಂಟೆಗಳಲ್ಲಿ ನೂರ ಹತ್ತು ಅಡಿ ಉದ್ದದ ಸೇತುವೆಯೊಂದನ್ನು ನಿರ್ಮಿಸುವ ಮೂಲಕ ಭಾರತೀಯ ಸೇನೆಯ ಗಡಿ ರಸ್ತೆ ಸಂಸ್ಥೆ ಮತ್ತೊಂದು ದಾಖಲೆ ನಿರ್ಮಿಸಿದೆ.
ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ಕೇಲಾ ಮೋರ್ ಎಂಬಲ್ಲಿ ಇದೇ ಜನವರಿ ೧೧ರಂದು ಸೇತುವೆ ಕುಸಿದಿತ್ತು. ಪರಿಣಾಮವಾಗಿ ಈ ಭಾಗದ ಜನತೆ ಸಂಪರ್ಕ ಸೇತುವಿಲ್ಲದೆ ತೀವ್ರ ಸಂಕಷ್ಟ ಎದುರಿಸುತ್ತಿದ್ದರು. ದೇಶದೊಂದಿಗಿನ ಕಣಿವೆಯ ಸಂಪರ್ಕ ಕಡಿತಗೊಂಡಿರುವುದನ್ನು ಗಮನಿಸಿದ ಸೇನೆಯ ಗಡಿ ರಸ್ತೆ ಸಂಸ್ಥೆ (ಬಿಆರ್‌ಒ), ಮಿಂಚಿನ ಕಾರ್ಯಚರಣೆಯಲ್ಲಿ  ಪ್ರೀ ಫ್ಯಾಬ್ರಿಕೇಟೆಡ್ ಉಕ್ಕಿನ ಫಲಕ ಬಳಸಿ ಈ ಸೇತುವೆ ನಿರ್ಮಿಸಿಕೊಟ್ಟಿದೆ.
ಶನಿವಾರ ಮಧ್ಯಾಹ್ನ ಸಂಚಾರಾರ್ಥವಾಗಿ ವಾಹನಗಳನ್ನು ಓಡಿಲಾಗಿದೆ. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಈಗ ಈ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss