ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Tuesday, June 22, 2021

ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ, ಕೊರೋನಾದಿಂದ ಸುರಕ್ಷಿತರಾಗಿರಿ.

Latest Posts

ಅರಸು ಸಮುದಾಯ ಭವನಕ್ಕೆ 25 ಲಕ್ಷ ಅನುದಾನ: ಸಿ.ಪಿ.ಯೋಗೇಶ್ವರ್

ಹೊಸ ದಿಗಂತ ವರದಿ, ರಾಮನಗರ:

ತಾಲೂಕಿನ ಹೊಂಗನೂರು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ವಿಜಯನಗರ ಅರಸು ಸಮುದಾಯ ಭವನಕ್ಕೆ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆ ನಿಧಿಯಿಂದ 25ಲಕ್ಷ ಅನುದಾನ ನೀಡಬೇಕೆಂದು ಮಾಜಿ ಸಚಿವ ಹಾಗೂ ವಿಧಾನಪರಿಷತ್ ಸದಸ್ಯ
ಸಿ.ಪಿ ಯೋಗೇಶ್ವರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದಿದ್ದಾರೆ.
ಹೊಂಗನೂರು ಗ್ರಾಮದಲ್ಲಿ ಅರಸು ಸಮುದಾಯ ಭವನ ನಿರ್ಮಾಣವಾಗುತ್ತಿದ್ದು. ಅದನ್ನು ಬೇಗ ಪೂರ್ಣಗೊಳಿಸಲು ಹಣದ ಅವಶ್ಯಕತೆ ಇದೆ ಹಾಗಾಗಿ ಅದನ್ನು ಬಹುಬೇಗ ಪೂರ್ಣಗೊಳಿಸಿ ಲೋಕಾರ್ಪಣೆ ಗೊಳಿಸಬೇಕೆಂದು ಹೊಂಗನೂರು ಗ್ರಾಮದ ಬಿಜೆಪಿ ಮುಖಂಡರು, ಯಜಮಾನರುಗಳು ವಿಧಾನಪರಿಷತ್ ಸದಸ್ಯ ಸಿ.ಪಿಯೋಗೇಶ್ವರ್ ರನ್ನು ಭೇಟಿ ಮಾಡಿ ಮನವಿ ಮಾಡಿದ್ದಾರೆ. ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಯೋಗೇಶ್ವರ್ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಹಣ ಬಿಡುಗಡೆ ಮಾಡುವಂತೆ ಕೋರಿದ್ದಾರೆ . ಹೊಂಗನೂರು ಗ್ರಾಮದಲ್ಲಿ ಜಯ ಗಳಿಸಿರುವ ಬಿಜೆಪಿ ಅಭ್ಯರ್ಥಿಗಳು, ಮುಖಂಡರು ,ಯಜಮಾನರುಗಳು ನಿನ್ನೆ ಸಿ.ಪಿ ಯೋಗೇಶ್ವರ್ ಅವರ ನಿವಾಸದಲ್ಲಿ ಭೇಟಿ ಮಾಡಿ ಅಭಿನಂದನೆ ಸಲ್ಲಿಸಿ ಗ್ರಾಮ ಪಂಚಾಯತಿ ಚುನಾವಣೆಗೆ ಸಹಕಾರಿ ಆಗಿದ್ದಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಇದೇ ವೇಳೆ ಸಮುದಾಯ ಭವನಕ್ಕೆ ಹಣ ಬಿಡುಗಡೆ ಕುರಿತು ಮನವಿ ಮಾಡಿದ್ದಾರೆ .ಹಿಂದೆಯೂ ಸಹ ಸಿ.ಪಿ. ಯೋಗೀಶ್ವರ್ ಶಾಸಕರಾಗಿದ್ದಾಗ ಸಮುದಾಯ ಭವನಕ್ಕೆ ಅಡಿಪಾಯ ಹಾಕಿದರು, ಇಂದು ಅದು ಪೂರ್ಣಗೊಂಡಿದ್ದು ಸ್ವಲ್ಪಮಟ್ಟಿನ ಕೆಲಸ ಬಾಕಿ ಉಳಿದಿರುವುದರಿಂದ ಗ್ರಾಮಸ್ಥರು ಅನುದಾನ ನೀಡುವಂತೆ ಮನವಿ ಮಾಡಿದ್ದಾರೆ. ಈ ಸಂದರ್ಭದಲ್ಲಿ ಹಲವು ಮುಖಂಡರು ಹಾಜರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_imgspot_img

Don't Miss