ಅರಿಶಿಣ ನಮ್ಮ ಆರೋಗ್ಯಕ್ಕೆ ಬಹಳ ಉಪಯೋಗಿ. ಅರಿಶಿಣ ಟೀಯನ್ನು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಆದರೆ ಹೇಗೆ ಅರಿಶಿಣ ಟೀ ಮಾಡುವುದು ಗೊತ್ತಿದೆಯೇ? ಇದನ್ನು ಕುಡಿದರೆ ಏನು ಲಾಭವಿದೆ ಗೊತ್ತೆ?
ಬೇಕಾಗುವ ಸಾಮಗ್ರಿ:
ಅರಿಶಿಣ
ನೀರು
ಹಾಲು
ಜೇನುತುಪ್ಪ
ಮಾಡುವ ವಿಧಾನ:
ಮೊದಲಿಗೆ ಅರ್ಧ ಕಪ್ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಅರಿಶಿಣ ಹಾಕಿ ಕುದಿಸಿ.
ನಂತರ ಅದಕ್ಕೆ ಅರ್ಧ ಕಪ್ ಹಾಲು, ಒಂದು ಚಮಚ ಜೇನುತುಪ್ಪ ಹಾಕಿ ಕೊಂಡು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ.
ಉಪಯೋಗಗಳು:
- ಅರಿಶಿಣದ ಟೀ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
- ಸಂಧಿವಾತ, ಮಂಡಿನೋವನ್ನು ತಡೆಯುತ್ತದೆ.
- ಹೃದಯದ ಆರೋಗ್ಯಕ್ಕೆ ಹೆಚ್ಚು ಲಾಭದಾಯಕ
- ಮಧುಮೇಹ ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ.
- ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
- ರಕ್ತ ಶುದ್ಧಿ ಮಾಡುತ್ತದೆ.