Saturday, July 2, 2022

Latest Posts

ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಐವರು ಚೀನಾದಲ್ಲಿ ಗಡಿಯೊಳಗೆ ಪತ್ತೆ

ನವದೆಹಲಿ: ಅರುಣಾಚಲ ಪ್ರದೇಶದಿಂದ ಕಾಣೆಯಾಗಿದ್ದ ಐವರು ವ್ಯಕ್ತಿಗಳು ತಮ್ಮ (ಚೀನಾ) ಕಡೆಯಲ್ಲಿ ಪತ್ತೆಯಾಗಿರುವುದಾಗಿ ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿ (ಪಿಎಲ್‌ಎ) ದೃಢಪಡಿಸಿದೆ ಎಂದು ಕೇಂದ್ರ ಸಚಿವ ಕಿರಣ್‌ ರಿಜಿಜು ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಕಿರಣ್‌ ರಿಜಿಜು, ‘ಭಾರತೀಯ ಸೇನೆಯು ಕಳುಹಿಸಿದ ಹಾಟ್‌ಲೈನ್ ಸಂದೇಶಕ್ಕೆ ಚೀನಾದ ಪಿಎಲ್‌ಎ ಪ್ರತಿಕ್ರಿಯಿಸಿದೆ. ಅರುಣಾಚಲ ಪ್ರದೇಶದಿಂದ ಕಾಣೆಯಾದ ಯುವಕರು ಚೀನಾದ ಕಡೆಯಲ್ಲಿ ಪತ್ತೆಯಾಗಿರುವುದಾಗಿ ಅವರು ಖಚಿತಪಡಿಸಿದ್ದಾರೆ. ಭಾರತಕ್ಕೆ ಅವರನ್ನು ಹಸ್ತಾಂತರಿಸುವ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗಿದೆ’ ಎಂದು ತಿಳಿಸಿದ್ದಾರೆ.
ಅರುಣಾಚಲ ಪ್ರದೇಶದ ಅಪ್ಪರ್ ಸುಬಾನ್ಸಿರಿ ಜಿಲ್ಲೆಯ ನಾಚೋ ಪ್ರದೇಶದ ಗ್ರಾಮದ ಈ ಐವರು ಭಾರತೀಯ ಸೇನೆಯ ಕೂಲಿಗಳು ಹಾಗೂ ಮಾರ್ಗದರ್ಶಕರಾಗಿ ಕೆಲಸ ಮಾಡುತ್ತಿದ್ದರು. ಏಳು ಜನರ ತಂಡ ಕಾಡಿನಲ್ಲಿ ಬೇಟೆಯಾಡಲು ತೆರಳಿದ್ದಾಗ ನಾಚೋದ ಉತ್ತರ ಭಾಗದ 12 ಕಿ.ಮೀ ದೂರದ ಸೇನಾ ಕಾವಲು ವಲಯ ಸೆರಾ 7 ರಿಂದ ಚೀನಾ ಪಡೆಗಳು ಐವರನ್ನು ಅಪಹರಣ ಮಾಡಿದೆ ಎಂದು ಮನೆಗೆ ಮರಳಿದ್ದ ಇಬ್ಬರು ಮಾಹಿತಿ ನೀಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss