Thursday, June 30, 2022

Latest Posts

ಅರೆಕಾಲಿಕ ಉಪನ್ಯಾಸಕರಿಗೆ ತಕ್ಷಣ ಗೌರವಧನ ನೀಡಲು ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಪ್ರಶಾಂತ ಆಗ್ರಹ

ಹೊಸದಿಗಂತ ವರದಿ, ಮಂಗಳೂರು

ರಾಜ್ಯದ 85 ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು 800 ಅರೆಕಾಲಿಕ ಉಪನ್ಯಾಸಕರಿಗೆ ಒಂದೂವರೆ ವರ್ಷದವರೆಗಿನ ಗೌರವಧನ ನೀಡಲು ಬಾಕಿಯಿದ್ದು, ಸರಕಾರ ತಕ್ಷಣ ಗೌರವಧನ ನೀಡುವ ಮೂಲಕ ಉಪನ್ಯಾಸಕರು ಬೀದಿಪಾಲಾಗುವುದನ್ನು ತಪ್ಪಿಸಬೇಕು ಎಂದು ಅಖಿಲ ಕರ್ನಾಟಕ ಸರಕಾರಿ ಪಾಲಿಟೆಕ್ನಿಕ್ ಅರೆಕಾಲಿಕ ಉಪನ್ಯಾಸಕರ ಸಂಘದ ಅಧ್ಯಕ್ಷ ಎಂ.ಪ್ರಶಾಂತ ಆಗ್ರಹಿಸಿದ್ದಾರೆ.

ಸರಕಾರಿ ಪಾಲಿಟೆಕ್ನಿಕ್‌ಗಳಲ್ಲಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಸುಮಾರು ೮೦೦ ಅರೆಕಾಲಿಕ ಉಪನ್ಯಾಸಕರಿಗೆ ಸರಕಾರವು ಗೌರವಧನ ನೀಡದೆ ನಿರಂತರವಾಗಿ ಶೋಷಣೆ ಮಾಡುತ್ತಿದೆ. ಐದಾರು ತಿಂಗಳು, ವರ್ಷಕ್ಕೊಮ್ಮೆ ದೊರೆಯುತ್ತಿದ್ದ ಅಲ್ಪಮೊತ್ತದ ಗೌರವಧನ ಈ ಬಾರಿ ಒಂದೂವರೆ ವರ್ಷಗಳಿಂದ ಸಿಕ್ಕಿಲ್ಲ. ಇದರಿಂದಾಗಿ ಉಪನ್ಯಾಸಕರು ಜೀವನ ನಡೆಸಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಗಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದರು.

ಒಂದೂವರೆ ವರ್ಷದವರೆಗಿನ ಗೌರವಧನ ನೀಡಲು ಬಾಕಿಯಿದ್ದರೂ ನಾವು ಬೋಧನೆಯ ಸೇವೆ ಮಾಡುತ್ತಿದ್ದೇವೆ. ನಮ್ಮ ಸಂಬಳ ಆಕಾಶದಲ್ಲಿರುವ ಉಲ್ಕೆಯಂತಾಗಿದೆ. ಸಂಕ್ರಾಂತಿ, ದಸರಾ, ಶಿವರಾತ್ರಿ, ದೀಪಾವಳಿ ಸೇರಿದಂತೆ ಎಲ್ಲಾ ಹಬ್ಬ, ಕುಟುಂಬ ವೆಚ್ಚ, ಸಾಲ ಪಾವತಿ ದಿನಾಂಕ ಎಲ್ಲವೂ ಕಳೆದುಹೋಗಿದ್ದರೂ ನಮಗೆ ಬಾಕಿ ಇರುವ ಗೌರವಧನ ಮಾತ್ರ ಇನ್ನೂ ಬಂದಿಲ್ಲ. ಈ ಬಗ್ಗೆ ಪ್ರಧಾನಿ ಸೇರಿದಂತೆ ದೇಶ, ರಾಜ್ಯದ ಎಲ್ಲ ಅಗ್ರಗಣ್ಯ ನಾಯಕರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಗೌರವಧನ ಇನ್ನೂ ಪಾವತಿಯಾಗಿಲ್ಲ ಎಂದು ಬೇಸರಿಸಿದರು.

ಉಪನ್ಯಾಸಕರಾದ ರಕ್ಷಣ್, ವಿಶ್ವಾಸ್ ಎಂ., ಮಮತಾ ಯು, ಉಷಾ ಉಪಸ್ಥಿತರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss